ಸೊಂಟದ ಸುತ್ತ ವಿಪರೀತ ಬೊಜ್ಜು ಬೆಳೆದಿದೆಯೇ, ಅದನ್ನು ಕರಗಿಸದೆ ಇದ್ದರೆ ಬಹುಬೇಗ ನಿಮಗೆ ಆರೋಗ್ಯದ ಸಮಸ್ಯೆಗಳು ಕಾಡುವ ಸಾಧ್ಯತೆಗಳಿವೆ. ಇದನ್ನು ಕರಗಿಸಿ ದೇಹ ತೂಕ ಇಳಿಸುವ ಸರಳ ವಿಧಾನಗಳು ಇಲ್ಲಿವೆ.
ದೇಹದ ಕೊಬ್ಬನ್ನು ಇಳಿಸಲು ನಿಂಬೆಹಣ್ಣಿನ ನೀರು ಅತ್ಯುತ್ತಮ ಔಷಧ. ಬೆಳಗ್ಗೆ ಎದ್ದಾಕ್ಷಣ ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ದೇಹದ ಕೊಬ್ಬು ಬಹುಬೇಗ ಕರಗುತ್ತದೆ. ಬೆಳಗಿನ ಉಪಹಾರದ ಮೊದಲು ಇದನ್ನು ಕುಡಿಯುವುದು ಕಡ್ಡಾಯ.
ನೀವು ನಿತ್ಯ ತಯಾರಿಸುವ ವಿಧಾನದಲ್ಲೇ ಚಹಾ ತಯಾರಿಸಿ ಅದಕ್ಕೆ ಒಂದು ತುಂಡು ಶುಂಠಿ ಜಜ್ಜಿ ಹಾಕಿ ಅದನ್ನು ಕುಡಿಯುವುದರಿಂದ ಶುಂಠಿಯ ಔಷಧೀಯ ಗುಣಗಳು ನಿಮ್ಮದಾಗುತ್ತವೆ. ಇದು ದೇಹತೂಕವನ್ನು ಕಡಿಮೆ ಮಾಡಿ ಶೀತ, ಕೆಮ್ಮು ಮೊದಲಾದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
ಶುಂಠಿ ರಸಕ್ಕೆ ಬೆಚ್ಚಗಿನ ನೀರು, ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯುವುದರಿಂದಲೂ ದೇಹತೂಕ ಇಳಿಯುತ್ತದೆ. ಹಸಿ ಬೆಳ್ಳುಳ್ಳಿಯನ್ನು ಜಗಿದು ತಿನ್ನುವುದರಿಂದ ಕೊಬ್ಬು ಕರಗುತ್ತದೆ. ರಕ್ತ ಪರಿಚಲನೆ ವೃದ್ಧಿಯಾಗುತ್ತದೆ. ನೀರಿನಲ್ಲಿ ಪುದೀನಾ ನೆನೆಸಿಟ್ಟು ಬಳಿಕ ಅದನ್ನು ಕುದಿಸಿ ಕುಡಿಯುವುದರಿಂದಲೂ ಜೀರ್ಣಕ್ರಿಯೆ ಚುರುಕುಗೊಂಡು ಕೊಬ್ಬು ಕರಗುತ್ತದೆ.