ವಿಟಮಿನ್ ಸಿ ದೆಹಕ್ಕೆ ಅಗತ್ಯವಾದ ಪೋಷಕಾಂಶವಾಗಿದ್ದು, ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹದ ಮತ್ತು ಚರ್ಮ, ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಮಧುಮೇಹ ಸಮಸ್ಯೆ ಇರುವವರು ಸೇವಿಸಬಹುದೇ ಎಂಬ ಗೊಂದಲವಿದೆ. ಅದಕ್ಕೆ ಉತ್ತರ ಇಲ್ಲಿದೆ.
ಅಧ್ಯಯನದ ಪ್ರಕಾರ ವಿಟಮಿನ್ ಸಿ ಬಳಕೆಯಿಂದ ಮಧುಮೇಹ ಸಮಸ್ಯೆಯ ಹಾನಿಯನ್ನು ಕಡಿಮೆಗೊಳಿಸಬಹುದಂತೆ. ಮಧುಮೇಹ ರೋಗಕ್ಕೆ ಒಳಗಾದವರು ಹಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ಕಣ್ಣಿನ ಕಾಯಲೆಗಳು ಮುಂತಾದ ಆರೋಗ್ಯ ಸಮಸ್ಯೆಯನ್ನುಂಟುಮಾಡುತ್ತದೆ.
ಹಾಗಾಗಿ ವಿಟಮಿನ್ ಸಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಮತ್ತು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರಿಂದ ಮಧುಮೇಹದಿಂದಾಗುವ ಅಪಾಯ ಕಡಿಮೆಯಾಗುತ್ತದೆಯಂತೆ.