ಕೂದಲ ಸೌಂದರ್ಯ ದುಪ್ಪಟ್ಟಾಗಲು ಅಲೋವೆರಾವನ್ನು ಈ ರೀತಿ ಬಳಸಿ

ಅಲೋವೆರಾ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಬಹಳ ಉಪಯೋಗಕಾರಿ. ಇದರಿಂದ ಚರ್ಮ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾದ್ರೆ ಆರೋಗ್ಯಕರವಾದ ಹಾಗೂ ಹೊಳೆಯುವ ಕೂದಲನ್ನು ಪಡೆಯಲು ಅಲೋವೆರಾವನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯಿರಿ.

*ಕೂದಲಿನ ಬೆಳವಣೆಗೆಯನ್ನು ಹೆಚ್ಚಿಸಿ ಉದ್ದವಾದ ಕೂದಲನ್ನು ಪಡೆಯಲು ಒಂದು ಕಪ್ ಅಲೋವೆರಾ ಜೆಲ್ ಗೆ 2 ಚಮಚ ಹರಳೆಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ರಾತ್ರಿಯಿಡಿ ಹಾಗೆ ಬಿಟ್ಟು ಮರುದಿನ ವಾಶ್ ಮಾಡಿ. ಇದನ್ನು ವಾರದಲ್ಲಿ ಒಮ್ಮೆ ಮಾಡಿ.

*ಕೂದಲಿನ ಹೊಳಪನ್ನು ಹೆಚ್ಚಿಸಲು ಅಲೋವೆರಾ ಗೆ ಆಲಿವ್ ಆಯಿಲ್ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ ಪೇಸ್ಟ್ ತಯಾರಿಸಿ ನೆತ್ತಿಗೆ ಹಚ್ಚಿ. 25 ನಿಮಿಷ ಬಿಟ್ಟು ಶಾಂಪು ಬಳಸಿ ವಾಶ್ ಮಾಡಿ.

*ಕೂದಲುದುರುವ ಮತ್ತು ತಲೆ ಹೊಟ್ಟು ಸಮಸ್ಯೆ ನಿವಾರಿಸಲು 1 ಕಪ್ ಮೆಂತ್ಯ ಕಾಳಿನ ಪೇಸ್ಟ್ ಗೆ 2 ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ವಾಶ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read