ಗರ್ಭಿಣಿಯರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಚರ್ಮದ ಆರೈಕೆಯ ಬಗ್ಗೆಯೂ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಹೆರಿಗೆಯ ಬಳಿಕ ನಿಮ್ಮ ಅಂದ ಕೆಡುತ್ತದೆ. ಹಾಗಾಗಿ ರಾಸಾಯನಿಕ ವಸ್ತುಗಳನ್ನು ಬಳಸುವ ಬದಲು ಈ ಟಿಪ್ಸ್ ಫಾಲೋ ಮಾಡಿ ನಿಮ್ಮ ಚರ್ಮದ ಆರೈಕೆ ಮಾಡಿ.
-ಚರ್ಮಕ್ಕೆ ಲಘು ಮಸಾಜ್ ಮಾಡಿ. ಪ್ರತಿದಿನ ಅಲೋವೆರಾ, ಆಲಿವ್ ಆಯಿಲ್, ಬಾದಾಮಿ ಎಣ್ಣೆ ಯಿಂದ ಚರ್ಮಕ್ಕೆ ಮಸಾಜ್ ಮಾಡಿ. ಇದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ, ಮತ್ತು ಚರ್ಮ ತೇವಾಂಶದಿಂದ ಕೂಡಿದ್ದು, ಒಣ ಚರ್ಮದ ಸಮಸ್ಯೆ ದೂರವಾಗುತ್ತದೆ. ಹಾಗೂ ಚರ್ಮವನ್ನು ಪುನಶ್ಚೇತನಗೊಳಿಸುತ್ತದೆ. ಇದರಿಂದ ಹೆರಿಗೆ ಬಳಿಕ ಬರುವ ಚರ್ಮದ ಸಮಸ್ಯೆ ದೂರವಾಗುತ್ತದೆ.
-ಪ್ರತಿದಿನ ಸ್ನಾನ ಮಾಡಿದ ತಕ್ಷಣ ಮಾಯಿಶ್ಚರೈಸರ್ ಕ್ರಿಂಗಳನ್ನು ಬಳಸಿ. ಅದರಲ್ಲೂ ರಾಸಾಯನಿಕ ಮುಕ್ತವಾದ ಕ್ರೀಂಗಳನ್ನು ಬಳಸಿ. ನೈಸರ್ಗಿಕ ಪದಾರ್ಥಗಳನ್ನು ಬಳಸಬಹುದು. ಇದು ಚರ್ಮದ ತೇವಾಂಶವನ್ನು ಸಮತೋಲನಗೊಳಿಸುತ್ತದೆ. ಮತ್ತು ಮೃದುವಾದ ಚರ್ಮವನ್ನು ನೀಡುತ್ತದೆ. ಇದರಿಂದ ಚರ್ಮದ ತುರಿಕೆಗಳು ಕಡಿಮೆಯಾಗುತ್ತದೆ.