ಮುಖದ ಚರ್ಮದ ಆರೈಕೆಗಾಗಿ ಹಲವಾರು ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಪದಾರ್ಥಗಳಿಂದ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಅವುಗಳನ್ನು ಹೆಚ್ಚಾಗಿ ಬಳಸಬಾರದು. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
*ನಿಂಬೆ : ನಿಂಬೆ ಹಣ್ಣು ಮುಖದ ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ. ಆದರೆ ಇದರಲ್ಲಿರುವ ಆಮ್ಲ ಚರ್ಮದ ಅಲರ್ಜಿಗೆ ಕಾರಣವಾಗಬಹುದು.
*ತೆಂಗಿನೆಣ್ಣೆ : ಇದರಲ್ಲಿರುವ ಆಮ್ಲವು ಚರ್ಮವನ್ನು ಮಸುಕಾಗಿಸಬಹುದು. ಮತ್ತು ಚರ್ಮದ ರಂಧ್ರಗಳನ್ನು ಮುಚ್ಚುವಂತೆ ಮಾಡುತ್ತದೆ. ಹಾಗಾಗಿ ಇದನ್ನು ಹೆಚ್ಚಾಗಿ ಮುಖಕ್ಕೆ ಬಳಸಬೇಡಿ.
*ಜೇನುತುಪ್ಪ : ಇದು ಬಹಳ ಔಷಧೀಯ ಗುಣಗಳನ್ನು ಹೊಂದಿದ್ದರೂ ಕೂಡ ಇದು ಕೆಲವೊಂದು ಚರ್ಮದ ಮೇಲೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಗುಳ್ಳೆಗಳು ಮೂಡುತ್ತವೆ.
*ಬಿಸಿ ನೀರು : ಇದು ಚರ್ಮದ ತೇವಾಂಶವನ್ನು ತೆಗೆದು ಹಾಕುತ್ತದೆ. ಮತ್ತು ಮೊಡವೆಗಳು ಮೂಡಲು ಕಾರಣವಾಗುತ್ತದೆ. ಹಾಗಾಗಿ ಬಿಸಿ ನೀರಿನ ಬದಲು ತಣ್ಣೀರನ್ನು ಹೆಚ್ಚಾಗಿ ಬಳಸಿ.