ನೀವು ಅಡುಗೆ ಮನೆಯಲ್ಲಿ ನಿತ್ಯ ಕುಕ್ಕರ್ ಬಳಸುವವರೇ, ಹಾಗಿದ್ದರೆ ನೀವು ಕಡ್ಡಾಯವಾಗಿ ಈ ಕೆಲವು ವಿಷಯಗಳತ್ತ ಗಮನ ಹರಿಸಲೇ ಬೇಕು.
ಪ್ರತಿ ಬಾರಿ ಗ್ಯಾಸ್ ಮೇಲೆ ಕುಕ್ಕರ್ ಇಡುವ ಮೊದಲು ಅದರ ಗ್ಯಾಸ್ ಹೋಗುವ ತೂತಿನಲ್ಲಿ ಯಾವುದಾದರೂ ಕಸ ಸಿಲುಕಿಕೊಂಡಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಗ್ಯಾಸ್ ಮೇಲಿಡುವ ಮೊದಲು ತಳಭಾಗದಲ್ಲಿ ಸಾಕಷ್ಟು ನೀರಿದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಿ.
ನೀವು ಮೊದಲ ಬಾರಿ ಕುಕ್ಕರ್ ಬಳಸುವವರಾದರೆ ತಳಭಾಗದಲ್ಲಿ ಎಷ್ಟು ನೀರು ಬೇಕು ಎಂಬುದನ್ನೂ ಕೇಳಿ ತಿಳಿದುಕೊಳ್ಳಿ. ನೀರು ಹೆಚ್ಚಾದರೂ ಸಮಸ್ಯೆ, ಹಾಗಾಗಿ ಎಷ್ಟು ಬೇಕೋ ಅಷ್ಟೆ ಬಳಸಿ.
ಉರಿ ನಂದಿದಾಕ್ಷಣ ಮುಚ್ಚಳ ತೆಗೆಯಲು ಹೋಗಬೇಡಿ. ವಿಷಲ್ ನಲ್ಲಿ ಹಬೆ ಪೂರ್ತಿ ಹೊರಹೋದ ಬಳಿಕವೇ ಅದನ್ನು ತೆಗೆಯಿರಿ. ಬೇಗ ತೆರೆಯಲೇಬೇಕೆಂಬ ಅವಸರವಿದ್ದರೆ ಸಿಂಕ್ ಒಳಗಿಟ್ಟು ನಿಧಾನಕ್ಕೆ ನೀರು ಬಿಡಿ. ಆಗ ಹೊರಗೂ ಒಳಗೂ ತಣ್ಣಗಾಗುತ್ತದೆ.
ಒಳಗಿನ ಹಬೆಯ ಸದ್ದು ವಿಷಲ್ ಮೂಲಕ ಕೇಳದಿದ್ದಾಗ ಮಾತ್ರ ಮುಚ್ಚಳ ತೆಗೆಯಿರಿ. ಆಯಾ ಆಹಾರಕ್ಕೆ ಬೇಕಾದಷ್ಟು ವಿಷಲ್ ಕೂಗಿಸಿ. ಎಲ್ಲಾ ಪದಾರ್ಥಗಳಿಗೆ ಒಂದೇ ಲೆಕ್ಕಾಚಾರವಿರುವುದಿಲ್ಲ.