ಸಾಮಾನ್ಯವಾಗಿ ಹೆಚ್ಚಿನವರ ಮನೆಯಲ್ಲಿ ಪೊರಕೆ ಮತ್ತು ಮಾಪ್ ಅನ್ನು ಅಡುಗೆ ಮನೆಯಲ್ಲಿ ಇಡುತ್ತಾರೆ. ಆದರೆ ವಾಸ್ತು ಪ್ರಕಾರ ಇದು ಸರಿಯೇ? ಇದರಿಂದ ಏನಾದರೂ ಸಮಸ್ಯೆಯಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ.
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯ ವಾಸಸ್ಥಳ ಎಂದು ಹೇಳುತ್ತಾರೆ. ಹಾಗಾಗಿ ಅಡುಗೆ ಮನೆ ಯಾವಾಗಲೂ ಸ್ವಚ್ಚವಾಗಿಡಬೇಕು. ಇಲ್ಲವಾದರೆ ಅಡುಗೆ ಮನೆಯಲ್ಲಿ ಪೊರಕೆ ಮತ್ಯು ಮಾಪ್ ನ್ನುಇಟ್ಟ ಪರಿಣಾಮ ಅನ್ನಪೂರ್ಣೇಶ್ವರಿ ದೇವಿ ಮುನಿಸಿಕೊಂಡು ಮನೆಯಲ್ಲಿ ಆಹಾರದ ಕೊರತೆ ಉಂಟಾಗುತ್ತದೆಯಂತೆ.
ಅಲ್ಲದೇ ಪೊರಕೆ ಮತ್ತು ಮಾಪ್ ನಲ್ಲಿ ಕೊಳೆ, ಧೂಳು ಇರುವುದರಿಂದ ಆಹಾರದಲ್ಲಿ ಇದು ಸೇರಿಕೊಂಡು ಮನೆಯ ಸದಸ್ಯರಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತದೆಯಂತೆ. ಹಾಗಾಗಿ ಅಡುಗೆ ಮನೆಯಲ್ಲಿ ಈ 2 ವಸ್ತುಗಳನ್ನು ಇಡಬೇಡಿ. ಆಗ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ.