ಆಲ್ಕೋಹಾಲನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯ ಕಾಂತಿ ಹೆಚ್ಚಿಸಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದು ನಿಜವೇ?
ಈ ಮಾತು ಎಲ್ಲಾ ಪ್ರಕಾರದ ಆಲ್ಕೋಹಾಲ್ ಗಳಿಗೂ ಹೊಂದಿಕೆಯಾಗುವುದಿಲ್ಲ. ಕೆಲವೊಂದು ವೈನ್ ಗಳಿಗೆ ಇತರ ಸಾಮಾಗ್ರಿಗಳನ್ನು ಬೆರೆಸಿ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಕೆಂಪು ವೈನ್ ಅದರಲ್ಲೊಂದು.
ಕೆಂಪು ವೈನ್ ಗೆ ಎರಡು ಚಮಚ ಮೊಸರು ಮತ್ತು ಜೇನುತುಪ್ಪ ಬೆರೆಸಿ ಪೇಸ್ಟ್ ತಯಾರಿಸಿ. ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡರೆ ಮುಖದ ಸುಕ್ಕುಗಳು ಕಡಿಮೆಯಾಗುತ್ತವೆ.
ವಿಸ್ಕಿಗೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಚೆನ್ನಾಗಿ ಕದಡಿ. ನಿಂಬೆರಸ ಮತ್ತು ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. ಒಂದು ಗಂಟೆ ಬಳಿಕ ತೊಳೆದರೆ ಮುಖದ ಕಪ್ಪು ಕಲೆ, ಮೊಡವೆಗಳು ದೂರವಾಗುತ್ತದೆ.
ಗ್ರೀನ್ ಟೀ ನೆನೆಸಿಟ್ಟ ನೀರನ್ನು ಬಿಯರ್ ಗೆ ಸೇರಿಸಿ ಬಾಳೆಹಣ್ಣಿನ ತುಂಡನ್ನು ಕಿವುಚಿ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಚಳಿಗಾಲದಲ್ಲಿ ತ್ವಚೆ ಒಣಗುವ ಸಮಸ್ಯೆ ದೂರವಾಗುತ್ತದೆ.