ಚಳಿಗಾಲದಲ್ಲಿ ತುಟಿ ಒಡೆಯುವುದು ಒಂದು ಸಾಮಾನ್ಯ ಸಮಸ್ಯೆ. ಅದಕ್ಕಾಗಿ ಕೆಲವು ಬಗೆಯ ಲಿಪ್ ಬಾಮ್ ಗಳನ್ನು ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಬಹುದು. ಅವುಗಳ ವಿಧಾನವನ್ನು ತಿಳಿಯೋಣ
ರಾಸ್ ಬೆರಿ ಲಿಪ್ ಬಾಮ್ ತಯಾರಿಕೆಗೆ ಒಣಗಿಸಿದ ರಾಸ್ ಬೆರಿ ಹಣ್ಣಿನ ಪುಡಿ ಬಳಸಬಹುದು. ಇದಕ್ಕೆ ಬಿಸಿ ಮಾಡಿದ ಕೊಬ್ಬರಿ ಎಣ್ಣೆ, ತುರಿದ ಜೇನುಮೇಣ(ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ) ಬೆರೆಸಿ ಚೆನ್ನಾಗಿ ಕಲಕಿ. ಸಣ್ಣ ಗಾಜಿನ ಬಾಟಲಿಗೆ ವರ್ಗಾಯಿಸಿ ಫ್ರೀಜರ್ ನಲ್ಲಿಟ್ಟರೆ ತಿಂಗಳ ತನಕ ಬೆಳಿಗ್ಗೆ ಸಂಜೆ ಎಂಬಂತೆ ಇದನ್ನು ಬಳಸಬಹುದು.
ಬೀಟ್ ರೂಟ್ ಲಿಪ್ ಬಾಮ್ ತಯಾರಿಸಲು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಬೀಟ್ ರೂಟನ್ನು ನೀರು ಬೆರೆಸದೆ ಮಿಕ್ಸಿಯಲ್ಲಿ ರುಬ್ಬಿ, ತೆಂಗಿನೆಣ್ಣೆ ಹಾಗೂ ಆಲಿವ್ ಆಯಿಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಗಾಜಿನ ಬಾಟಲಿಯಲ್ಲಿಟ್ಟು ಫ್ರಿಜ್ ನಲ್ಲಿಟ್ಟರೆ ತುಟಿ ಕಪ್ಪಾಗುವುದು ಹಾಗೂ ಒಡೆಯುವ ಸಮಸ್ಯೆ ದೂರವಾಗುತ್ತದೆ.
ಗುಲಾಬಿದಳದ ಲಿಪ್ ಬಾಮ್ ತಯಾರಿಸಲು ಕೊಬ್ಬರಿ ಎಣ್ಣೆ, ಜೇನುಮೇಣ ಮತ್ತು ಆಲಿವ್ ಆಯಿಲ್ ಅನ್ನು ಬಿಸಿ ಮಾಡಿ. ಬಳಿಕ ಒಣಗಿಸಿ ಸಣ್ಣದಾಗಿ ಕತ್ತರಿಸಿದ ಗುಲಾಬಿ ದಳ ಬೆರೆಸಿ ಮತ್ತೆ ಬಿಸಿ ಮಾಡಿ. ಇದು ಪರಿಮಳ ಹೊರಸೂಸುವಾಗ ಜೇನುತುಪ್ಪ ಬೆರೆಸಿ ಸಣ್ಣ ಡಬ್ಬಿಯಲ್ಲಿ ಸಂಗ್ರಹಿಸಿ ಫ್ರೀಜ್ ಮಾಡಿ. ಬೇಕಾದಾಗ ಬಳಸಿ.