ಮನೆಯಲ್ಲಿ ಮಕ್ಕಳು ಊಟ ಮಾಡಲು ಕೇಳದೆ ಹಟ ಮಾಡುತ್ತಿದ್ದರೆ ಅವರಿಗೆ ಓಮದ ಕಷಾಯ ತಯಾರಿಸಿ ಕೊಡುವುದನ್ನು ನೀವು ಕಂಡಿರಬಹುದು. ಇದರ ಹೊರತಾಗಿಯೂ ಆರೋಗ್ಯ ವೃದ್ಧಿಗೆ ಓಮವನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ.
ಓಮದೊಂದಿಗೆ ಜೀರಿಗೆ ಬೆರೆಸಿ ಹುರಿದು ಹುಡಿ ಮಾಡಿ, ನೀರಿಗೆ ಬೆರೆಸಿ ಚೆನ್ನಾಗಿ ಕುದಿಸಿ. ಬಳಿಕ ಚಿಟಿಕೆ ಉಪ್ಪು ಸೇರಿಸಿ ಮಕ್ಕಳಿಗೆ ಕುಡಿಸಿದರೆ ಅಜೀರ್ಣ ಸಂಬಂಧಿ ಸಮಸ್ಯೆಗಳು ಬಹುಬೇಗ ದೂರವಾಗುತ್ತವೆ.
ಮಹಿಳೆಯರ ಮುಟ್ಟಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿನ ನಿವಾರಣೆಗೆ ಓಮವನ್ನು ನಿಮ್ಮ ಆಹಾರದಲ್ಲಿ ಬೆರೆಸಿ ಸೇವಿಸಿ. ಇದರಿಂದ ಬೆನ್ನು ನೋವಿನಂಥ ಸಮಸ್ಯೆಗಳೂ ದೂರವಾಗುತ್ತವೆ.
ಅಸ್ತಮಾ ರೋಗಿಗಳು ಇದರ ಹೊಗೆಯನ್ನು ಉಸಿರಾಟದ ಮೂಲಕ ಸೇವಿಸಿದರೆ ಅಸ್ತಮಾ ಸಮಸ್ಯೆ ದೂರವಾಗುತ್ತದೆ. ಮಾತ್ರವಲ್ಲ ಕೆಮ್ಮು ತಲೆನೋವು ಶೀತದ ಸಮಸ್ಯೆಗಳನ್ನೂ ಹೊಡೆದೋಡಿಸಬಹುದು.
ಮಧುಮೇಹ ನಿಯಂತ್ರಣಕ್ಕೂ ಓಮದ ಕಾಳುಗಳನ್ನು ಸೇವಿಸಬಹುದು ಎನ್ನುತ್ತಾರೆ ತಜ್ಞರು. ಉರಿಮೂತ್ರದ ಸಮಸ್ಯೆಗಳಿಗೂ ಇದು ಹೇಳಿ ಮಾಡಿಸಿದ ಮದ್ದು.