ಒಣ ದ್ರಾಕ್ಷಿಯನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ? ಇದು ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿ ವೈದ್ಯರ ಬಳಿ ತೆರಳದಂತೆ ನೋಡಿಕೊಳ್ಳುತ್ತದೆ.
ರಾತ್ರಿ ಒಂದು ಮುಷ್ಠಿ ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಮುಂಜಾನೆ ಎದ್ದಾಕ್ಷಣ ಆ ನೀರಿನ ಸಹಿತ ಸೇವಿಸುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ದೂರವಾಗುತ್ತದೆ. ರಕ್ತ ಶುದ್ಧವಾಗುತ್ತದೆ. ತುರಿಕೆ, ಕಜ್ಜಿ ಮೊದಲಾದ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ
ಇದು ದೇಹದ ಕಲ್ಮಶಗಳನ್ನು ಹೊರಹಾಕುತ್ತದೆ. ಕೂದಲು ಉದ್ದಗಾಗಿ ಬೆಳೆಯಲು ನಿಮಗೆ ನೆರವಾಗುತ್ತದೆ. ಕೂದಲು ಉದುರುವಿಕೆಯ ಸಮಸ್ಯೆಯನ್ನು ದೂರ ಮಾಡುತ್ತದೆ.
ಮೂಳೆಗಳನ್ನು ದೃಢಪಡಿಸಿ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತವೆ. ರಕ್ತ ಹೀನತೆಯನ್ನು ದೂರ ಮಾಡಿ ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ. ಮಕ್ಕಳಿಗೂ ಇದನ್ನು ನಿತ್ಯ ಸೇವಿಸಲು ಕೊಡುವುದರಿಂದ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.