HomeBeautyಕೂದಲಿನ ಬೆವರು ವಾಸನೆ ತಡೆಯಲು ಈ ಮನೆ ಮದ್ದನ್ನು ಬಳಸಿ

ಕೂದಲಿನ ಬೆವರು ವಾಸನೆ ತಡೆಯಲು ಈ ಮನೆ ಮದ್ದನ್ನು ಬಳಸಿ

ತಲೆಯಲ್ಲಿ ಹೆಚ್ಚಾಗಿ ಬೆವರು ಬರುವುದರಿಂದ ಮತ್ತು ಕೊಳೆಯ ಕಾರಣದಿಂದ ತಲೆ ಕೂದಲು ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಬೇರೆಯವರ ಬಳಿ ಹೋಗಲು ಮುಜುಗರವಾಗುತ್ತದೆ. ಕೂದಲು ಈ ರೀತಿ ವಾಸನೆ ಬರುವುದನ್ನು ತಡೆಯಲು ಈ ಟಿಪ್ಸ್ ಫಾಲೋ ಮಾಡಿ.

ಟೀ ಟ್ರೀ ಆಯಿಲ್ ಕೂದಲಿನಲ್ಲಿ ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಹಾಗಾಗಿ ಟೀ ಟ್ರೀ ಆಯಿಲ್ 6 ಹನಿ, 2 ಚಮಚ ಬಾದಾಮಿ ಎಣ್ಣೆ ಎರಡನ್ನು ಸೇರಿಸಿ ಮಿಕ್ಸ್ ಮಾಡಿ ನೆತ್ತಿಗೆ ಹಾಗೂ ಕೂದಲಿಗೆ ಅನ್ವಯಿಸಿ 30 ನಿಮಿಷಗಳ ಕಾಲ ಹಾಗೇ ಬಿಡಿ. ಇದನ್ನು ದಿನಕ್ಕೆ 2 ಬಾರಿ ಹಚ್ಚಬಹುದು. ಹೀಗೆ ಮಾಡಿದರೆ ಕೂದಲು ವಾಸನೆ ಬರುವುದನ್ನು ತಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಂಬೆ ಹಣ್ಣು ಬ್ಯಾಕ್ಟೀರಿಯಾ ನಾಶಕ ಗುಣವನ್ನು ಹೊಂದಿದೆ. ಇದು ಕೂದಲು ವಾಸನೆ ಬರುವುದನ್ನು ತಡೆಯುತ್ತದೆ. ಮತ್ತು ತಲೆ ಹೊಟ್ಟಿನ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗಾಗಿ 2 ಚಮಚ ನಿಂಬೆ ರಸಕ್ಕೆ 1 ಕಪ್ ಬೆಚ್ಚಗಿನ ನೀರನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular