ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಕುಳಿತುಕೊಳ್ಳುವ ಬೊಜ್ಜು ಬಹುಬೇಗ ಕರಗುವುದೇ ಇಲ್ಲ. ಇದಕ್ಕೆ ಎಷ್ಟು ಕಸರತ್ತು ಮಾಡಿದರೂ ಕಡಿಮೆಯೇ. ಅಡುಗೆ ಮನೆಯಲ್ಲಿರುವ ಅರಶಿನಕ್ಕೆ ಈ ಬೊಜ್ಜು ಕರಗಿಸುವ ಶಕ್ತಿ ಇದೆ.
ಇದರಲ್ಲಿರುವ ಕರ್ಕುಮಿನ್ ಅಂಶ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್ ನಂಥ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ನೇರವಾಗಿ ಇದರ ಸೇವನೆ ಸಾಧ್ಯವಿಲ್ಲವಾದ್ದರಿಂದ ಸಾರು, ಪಲ್ಯಗಳ ತಯಾರಿಗೆ ಇದನ್ನು ಬಳಸಿಕೊಳ್ಳಬಹುದು. ರಾತ್ರಿ ಮಲಗುವ ವೇಳೆ ಕುಡಿಯುವ ಬಿಸಿ ಹಾಲಿಗೆ ಚಿಟಿಕೆ ಅರಶಿನ ಪುಡಿ ಸೇರಿಸಿ ಕುಡಿದರೆ ಶೀತ, ಕಫ ಕೆಮ್ಮುವಿನಂಥ ಸಮಸ್ಯೆಗಳು ದೂರವಾಗುತ್ತವೆ.
ನಿತ್ಯ ಇದನ್ನು ಒಂದಲ್ಲ ಒಂದು ರೂಪದಲ್ಲಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ. ನಿತ್ಯ ಅನುಸರಿಸುವ ವ್ಯಾಯಾಮದೊಂದಿಗೆ ಇದರ ಸೇವನೆಯಿಂದ ತೂಕ ಇಳಿಸುವುದು ಸುಲಭವಾಗುತ್ತದೆ.