ತುಪ್ಪವನ್ನು ಎಲ್ಲಿ ಹೇಗೆ ಸಂಗ್ರಹಿಸಿಟ್ಟರೆ ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ ಎಂಬುದರ ಬಗ್ಗೆ ತಿಳಿಯೋಣ.
ಬಹೂಪಯೋಗಿ ತುಪ್ಪ ದೇಹಕ್ಕೆ ಅತ್ಯಗತ್ಯವಾದ ಕೊಬ್ಬನ್ನು ಮಾತ್ರ ನೀಡುತ್ತದೆ. ಹಾಗಾಗಿ ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಗಳಿಲ್ಲ.
ತುಪ್ಪಕ್ಕೆ ನೀರಿನ ಹನಿಗಳು ಬಿದ್ದರೆ ಬಹುಬೇಗ ಹಾಳಾಗುತ್ತದೆ. ಹಾಗಾಗಿ ಹೆಚ್ಚು ಶುಷ್ಕ ಪ್ರದೇಶದಲ್ಲಿ ಇದನ್ನು ಸಂಗ್ರಹಿಸಿಡಬಹುದು. ಹಾಗೆಂದು ವಿಪರೀತ ಬಿಸಿ ಇರುವಲ್ಲಿಯೂ ಇಡುವುದು ಒಳ್ಳೆಯದಲ್ಲ. ಬೇಸಿಗೆ ಕಾಲದಲ್ಲಿ ಹೆಚ್ಚು ದಿನಗಳ ತನಕ ಬಾಳಿಕೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಬೇಗ ಬಳಸಿ ಮುಗಿಸುವುದು ಒಳ್ಳೆಯದು.
ಗಾಳಿಯಾಡದ, ಗಾಜಿನ ಬಾಟಲ್ ಗಳಲ್ಲಿ ತುಪ್ಪವನ್ನು ತುಂಬಿಸಿಡುವುದು ಒಳ್ಳೆಯದು. ಇದನ್ನು ಫ್ರಿಜ್ ನಲ್ಲಿಟ್ಟು ಬೇಕಾದಾಗ ಬಳಸಬಹುದು. ಹೊರಗಿಟ್ಟ ತುಪ್ಪವನ್ನು ಮೂರು ತಿಂಗಳ ತನಕ ಬಳಸಬಹುದು. ಅದೇ ಫ್ರಿಜ್ ನೊಳಗಿಟ್ಟರೆ ಆರು ತಿಂಗಳ ತನಕ ಅದನ್ನು ಬಳಸಬಹುದು.
ಮನೆಯಲ್ಲೇ ತುಪ್ಪ ತಯಾರಿಸುವುದಾದರೆ ಅದು ಸರಿಯಾದ ಪಾಕ ಬರುವ ತನಕ ಕಾಯಿಸಿ ಬಳಿಕ ಸೋಸಿ. ಹಾಗೆ ಕುದಿಸುವಾಗ ಎರಡು ತುಳಸಿ ಕುಡಿಯನ್ನು ಹಾಕುವುದರಿಂದ ತುಪ್ಪದ ಅಡ್ಡ ವಾಸನೆ ದೂರವಾಗುತ್ತದೆ.