ನವೆಂಬರ್ 12 ಮತ್ತು 13 ರಂದು ದೀಪಾವಳಿ ಹಬ್ಬವನ್ನು ಆಚರಿಲಾಗ್ತಿದೆ. ಸಂತೋಷ, ಸಮೃದ್ಧಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ದಿನ ಜನರು ಪರಸ್ಪರ ಸಿಹಿ ತಿಂಡಿಗಳನ್ನು ಹಂಚಿಕೊಂಡು, ಉಡುಗೊರೆ ನೀಡಿ ಸಂಭ್ರಮಿಸುತ್ತಾರೆ. ಆದರೆ ನಾವು ನೀಡುವ ಕೆಲವೊಂದು ಉಡುಗೊರೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನವರಾತ್ರಿಯಂದು ಯಾವ ಉಡುಗೊರೆ ನೀಡಬೇಕು ಎಂಬುದನ್ನು ಮೊದಲೇ ತಿಳಿದಿರಬೇಕು.
ದೀಪಾವಳಿ ಸಂದರ್ಭದಲ್ಲಿ ಭಗವದ್ಗೀತೆಯನ್ನು ಯಾರಿಗೂ ಉಡುಗೊರೆ ರೂಪದಲ್ಲಿ ನೀಡಬಾರದು. ಹಾಗೆ ಇದರ ಚಿತ್ರವನ್ನು ಮನೆಯ ಗೋಡೆಯ ಮೇಲೆ ಹಾಕಬಾರದು. ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ದೇವಾನುದೇವತೆಗಳ ಫೋಟೋಗಳನ್ನು ಉಡುಗೊರೆ ರೂಪದಲ್ಲಿ ನೀಡುತ್ತೇವೆ. ದೇವರ ಫೋಟೋಗಳನ್ನು ನೀಡುವಾಗ ಉಗ್ರವಾಗಿರುವ ದೇವರ ಫೋಟೋ ಅಥವಾ ಯುದ್ಧ ಮಾಡುತ್ತಿರುವ ದೇವರ ಫೋಟೋವನ್ನು ನೀಡಬಾರದು. ಕಾಡು ಪ್ರಾಣಿಗಳು ಮತ್ತು ಸೂರ್ಯಾಸ್ತದ ಫೋಟೋವನ್ನು ಕೂಡ ನೀಡಬಾರದು.
ದೀಪಾವಳಿಯಲ್ಲಿ ತಾಯಿ ಲಕ್ಷ್ಮಿ ಫೋಟೋ ಅಥವಾ ಮೂರ್ತಿಯನ್ನು ನೀಡಲು ಬಯಸುತ್ತಾರೆ. ಕುಳಿತುಕೊಂಡಿರುವ ಲಕ್ಷ್ಮಿ ಮೂರ್ತಿ ಅಥವಾ ಫೋಟೋವನ್ನು ಉಡುಗೊರೆಯಾಗಿ ನೀಡಬೇಕು. ಯಾವುದೇ ಕಾರಣಕ್ಕೂ ನಿಂತಿರುವ ಲಕ್ಷ್ಮಿ ಫೋಟೋ ನೀಡಬಾರದು. ಕಳ್ಳಿ ಹಾಗೂ ಬೋನ್ಸಾಯಿ ಗಿಡಗಳನ್ನು ಉಡುಗೊರೆಯಾಗಿ ನೀಡಬಾರದು. ಇದು ಉಡುಗೊರೆ ನೀಡುವ ಹಾಗೂ ಕೊಡುವವರ ಮಧ್ಯೆ ಸಂಬಂಧವನ್ನು ಹಾಳು ಮಾಡುತ್ತದೆ.