ಕೆಲವು ಮಕ್ಕಳಿಗೆ ಎಲ್ಲಾ ಆಹಾರ ಪದಾರ್ಥಗಳು ಒಗ್ಗುವುದಿಲ್ಲ. ಈ ಸಮಸ್ಯೆಯನ್ನು ಗುರುತಿಸಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಯಾಕೆಂದರೆ ಪದೇ ಪದೇ ಈ ಸಮಸ್ಯೆಗೆ ಮಕ್ಕಳು ಒಳಗಾದರೆ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದಕಾರಣ ನಿಮ್ಮ ಮಕ್ಕಳಿಗೆ ಆಹಾರ ಅಲರ್ಜಿ ಸಮಸ್ಯೆ ಕಾಡುತ್ತಿದೆಯೇ ಎಂಬುದನ್ನು ಈ ಲಕ್ಷಣಗಳ ಮೂಲಕ ಕಂಡುಹಿಡಿಯಬಹುದು.
ಮಗುವಿಗೆ ಯಾವುದಾದರೂ ಆಹಾರದಲ್ಲಿ ಅಲರ್ಜಿ ಇದ್ದರೆ, ಅವರು ಅದನ್ನು ಸೇವಿಸಿದ ಒಂದು ಗಂಟೆಯೊಳಗೆ ರೋಗಲಕ್ಷಣಗಳು ಕಂಡುಬರುತ್ತವೆ. ಮಕ್ಕಳಲ್ಲಿ ವಾಂತಿ, ಅತಿಸಾರ, ಹೊಟ್ಟೆಯ ಸೆಳೆತ, ತುಟಿ, ನಾಲಿಗೆ ಮತ್ತು ಬಾಯಿಯಲ್ಲಿ ಊತ ಕಂಡುಬರುತ್ತದೆ.
ಹಾಗೇ ಗಂಟಲು ಮತ್ತು ದೇಹದ ಇತರ ಭಾಗಗಳಲ್ಲಿ ತುರಿಕೆ ಸಂಭವಿಸುತ್ತದೆ. ಕೆಲವೊಮ್ಮೆ ಮಗುವಿಗೆ ಉಸಿರಾಟದ ಸಮಸ್ಯೆ ಮತ್ತು ಉಬ್ಬಸ ಕಂಡುಬರುತ್ತದೆ. ತೀವ್ರವಾದ ಪ್ರಕರಣಗಳಲ್ಲಿ ರಕ್ತದೊತ್ತಡದ ಮಟ್ಟವು ಕಡಿಮೆಯಾಗುತ್ತದೆ. ಇಂತಹ ಸಮಸ್ಯೆ ಕಂಡುಬಂದಾಗ ತಕ್ಷಣ ಮಕ್ಕಳನ್ನು ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ನೀಡಿ.