ನೀವು ಸೇವಿಸುವ ಆಹಾರಕ್ಕೆ ಬೆಳ್ಳುಳ್ಳಿ ಬಳಸಿದರೆ ಅದಕ್ಕೆ ಸಿಗುವ ರುಚಿಯೇ ಬೇರೆ. ಅದರಂತೆ ಬೆಳ್ಳುಳ್ಳಿ ಸೇವನೆಯಿಂದ ದೇಹಕ್ಕೂ ಹಲವು ರೀತಿಯ ಪ್ರಯೋಜನಗಳಿವೆ. ಅದರಲ್ಲಿ ಮುಖ್ಯವಾದುದು ಎಂದರೆ ಬೆಳ್ಳುಳ್ಳಿ ಸೇವನೆಯಿಂದ ತೂಕ ಇಳಿಸಿಕೊಳ್ಳಬಹುದು ಎಂಬುದು.
ಬೆಳ್ಳುಳ್ಳಿಯಲ್ಲಿ ಹೇರಳವಾದ ಔಷಧೀಯ ಗುಣಗಳಿದ್ದು ಶೀತ ಕೆಮ್ಮಿನಂಥ ಸಾಧಾರಣ ಕಾಯಿಲೆಗಳನ್ನು ಗುಣ ಪಡಿಸುವ ಶಕ್ತಿ ಇದಕ್ಕಿದೆ. ಬೆಳ್ಳುಳ್ಳಿಯಲ್ಲಿ ಇರುವ ವಿಟಮಿನ್ ಬಿ6, ಸಿ, ನಾರಿನಂಶ, ಕ್ಯಾಲ್ಸಿಯಂ ತೂಕ ಇಳಿಕೆಗೆ ನೆರವಾಗುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.
ಬೆಳ್ಳುಳ್ಳಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ದೂರಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಇವುಗಳನ್ನು ನಿತ್ಯ ಆಹಾರದಲ್ಲಿ ಬಳಸಬಹುದು. ಸಿಪ್ಪೆ ತೆಗೆದ ಬೆಳ್ಳುಳ್ಳಿಯನ್ನು ರಾತ್ರಿ ನೀರಿಗೆ ಹಾಕಿಡಿ. ಬೆಳಿಗ್ಗೆ ಆ ನೀರಿಗೆ ಕರಿಮೆಣಸಿನ ಪುಡಿ ಹಾಕಿ ಖಾಲಿ ಹೊಟ್ಟೆಗೆ ಸೇವಿಸಿ.
ಬೆಳ್ಳುಳ್ಳಿ ಜಜ್ಜಿ ಜೇನುತುಪ್ಪ ಬೆರೆಸಿ 20 ನಿಮಿಷ ಬಳಿಕ ಸೇವಿಸಿ. ನಿತ್ಯ ಇದನ್ನು ಮಾಡುವುದರಿಂದ ತಿಂಗಳೊಳಗೆ ನಿಮ್ಮ ತೂಕ ಇಳಿಯುವುದನ್ನು ನೋಡಿ. ಬೆಳ್ಳುಳ್ಳಿಯೊಂದಿಗೆ ಜೇನುತುಪ್ಪದ ಬದಲು ನಿಂಬೆರಸ ಬೆರೆಸಿ ಕುಡಿದರೂ ಇದೇ ಪರಿಣಾಮ ಲಭ್ಯವಾಗುತ್ತದೆ.