ಬೊಜ್ಜು ಕಡಿಮೆ ಮಾಡಬೇಕೆನ್ನುವವರು ಈ ತಪ್ಪು ಮಾಡಬೇಡಿ

ದೇಹದಲ್ಲಿ ಹೆಚ್ಚಾಗಿರುವ ಬೊಜ್ಜು ನಿಮ್ಮ ಚಿಂತೆಗೆ ಕಾರಣವಾಗಿದೆಯಾ….? ಈ ಬೊಜ್ಜನ್ನ ಕಡಿಮೆ ಮಾಡಿಕೊಳ್ಳಲು ದಿನಕ್ಕೊಂದು ಹೊಸ ಹೊಸ ಉಪಾಯ ಹುಡುಕಿಕೊಳ್ತಿದ್ದಿರಾ…? ಹಾಗಾದ್ರೆ ನೀವು ಮೊಟ್ಟ ಮೊದಲು ನಿಮ್ಮ ರಾತ್ರಿ ಊಟದತ್ತ ಹೆಚ್ಚು ಗಮನ ಕೊಡಬೇಕು. ಕಾರಣ ರಾತ್ರಿ ಊಟದಲ್ಲಿ ಬದಲಾವಣೆ ತಂದರೆ ನಿಮ್ಮ ದೇಹದ ಬೊಜ್ಜು ಕಡಿಮೆ ಆಗುತ್ತೆ ಅಂತ ಆಹಾರ ತಜ್ಞರು ಸಲಹೆ ನೀಡಿದ್ದಾರೆ.

ಅನಗತ್ಯವಾಗಿ ಏನೇನೋ ಸೇವಿಸೋದರ ಬದಲು ಪ್ರೋಟಿನ್ ಅಂಶ ಇರುವ ಆಹಾರವನ್ನು ಸೇವಿಸಬೇಕು. ಹೊರಗಿನ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಿ. ಮಧ್ಯಾಹ್ನದ ಊಟಕ್ಕೂ ರಾತ್ರಿಯ ಊಟಕ್ಕೂ ಸಮಯದ ಅಂತರ ಇರಲಿ. ರಾತ್ರಿ ಊಟಕ್ಕಿಂತ ಮುಂಚೆ ಜಂಕ್ ಫುಡ್ ತಿನ್ನಬೇಡಿ. ಇನ್ನು ಮಧ್ಯಾಹ್ನದ ಊಟದಲ್ಲಿ ಹೆಚ್ಚಾಗಿ ಹಣ್ಣುಗಳು, ತರಕಾರಿಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಇಷ್ಟವಾಗಿರುವ ಆಹಾರ ಸೇವಿಸಲು ಹಿಂದೆ ಮುಂದೆ ನೋಡಬೇಡಿ. ಆದರೆ ಅವುಗಳ ಪ್ರಮಾಣವನ್ನ ಕಡಿಮೆ ಮಾಡಿಕೊಳ್ಳಿ. ಆದಷ್ಟು ಶೇಖರಿಸಿಟ್ಟ, ಫ್ರಿಡ್ಜ್ ನಲ್ಲಿಟ್ಟ  ಆಹಾರವನ್ನ ತಿನ್ನದಿರುವುದು ಒಳ್ಳೆಯದು. ಖುಷಿಯಾಗಿ, ಮನೆಯವರೆಲ್ಲ ಒಟ್ಟಿಗೆ ಕುಳಿತು ಆಹಾರ ಸೇವನೆ ಮಾಡಬೇಕು. ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡಬೇಕು. ಇದ್ರಿಂದ ಕಡಿಮೆ ಆಹಾರ ದೇಹ ಸೇರುತ್ತದೆ.ಮನಸ್ಸು ಖುಷಿಯಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read