ಬಾಯ್ ಫ್ರೆಂಡ್ ನಿಮ್ಮ ಸ್ನೇಹಿತರಾಗಿರ್ತಾರೆ. ಎಲ್ಲ ವಿಷಯವನ್ನು ಅವರ ಮುಂದೆ ಬಿಚ್ಚಿಡಬೇಕೆಂಬ ಕಾತರ ಸಹಜ. ಹಾಗಂತ ಎಲ್ಲ ವಿಷಯವನ್ನು ಅವರ ಮುಂದೆ ಹೇಳುವುದು ಸರಿಯಲ್ಲ. ಕೆಲವೊಂದು ವಿಚಾರ ಮಾತನಾಡುವಾಗ ಯೋಚಿಸಿ ಮಾತನಾಡಬೇಕಾಗುತ್ತದೆ. ಇದೇ ಮಾತು ನಿಮ್ಮ ಸಂಬಂಧಕ್ಕೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇರುತ್ತೆ.
ಸಂಬಂಧ ಕನ್ನಡಿಯಂತಿರಬೇಕು ನಿಜ. ಎಲ್ಲ ವಿಷಯವೂ ನಿಮ್ಮ ಬಾಯ್ ಫ್ರೆಂಡ್ ಗೆ ತಿಳಿದಿರಬೇಕು. ಅದಾಗ್ಯೂ ಕೆಲವೊಂದು ಮಾತುಗಳನ್ನು ಬಾಯ್ ಫ್ರೆಂಡ್ ಮುಂದೆ ಆಡಬಾರದು.
ನನ್ನ ಎಕ್ಸ್ ಬಾಯ್ ಫ್ರೆಂಡ್ ಕೂಡ ಹೀಗೆ ಮಾಡ್ತಿದ್ದ ಎಂಬ ವಿಷಯವನ್ನು ಎಂದೂ ನಿಮ್ಮ ಬಾಯ್ ಫ್ರೆಂಡ್ ಮುಂದೆ ಹೇಳಬೇಡಿ. ಇದು ಆತನ ಮನಸ್ಸಿಗೆ ನೋವುಂಟು ಮಾಡುತ್ತದೆ. ನಾನಿದ್ದೂ ಈಕೆ ಹಳೆ ಬಾಯ್ ಫ್ರೆಂಡ್ ಮರೆತಿಲ್ಲ ಎಂಬ ಭಾವನೆ ಆತನಲ್ಲಿ ಮೂಡುತ್ತದೆ.
ನಿಮ್ಮ ಬಾಯ್ ಫ್ರೆಂಡ್ ಅಮ್ಮನ ಮಗನಾಗಿದ್ದರೆ ಆ ಬಗ್ಗೆ ಭಯಪಡುವ ಅಗತ್ಯವಿಲ್ಲ. ಹಾಗೆ ಬಾಯ್ ಫ್ರೆಂಡ್ ಮುಂದೆ ಎಂದೂ ನಿನ್ನ ಅಮ್ಮ ನನಗೆ ಇಷ್ಟವಾಗಲ್ಲ ಎನ್ನಬೇಡಿ.
ಯಾವುದೋ ವಿಚಾರಕ್ಕೆ ಮೂಡ್ ಹಾಳಾಗಿದೆ. ಏಕೆ ಅಂತಾ ಬಾಯ್ ಫ್ರೆಂಡ್ ಕೇಳ್ತಾನೆ. ಆಗ ಏನೂ ಆಗಿಲ್ಲ ಎನ್ನುವ ಉತ್ತರ ಮಾತ್ರ ನೀಡಬೇಡಿ. ಇದು ಹುಡುಗರಿಗೆ ಇಷ್ಟವಾಗುವುದಿಲ್ಲ.
ನಿಮ್ಮ ಪ್ರಿಯಕರನ ಸ್ನೇಹಿತನಿರಲಿ, ಅಣ್ಣನಿರಲಿ ಇಲ್ಲ ಬೇರೆ ಯಾವುದೇ ಪುರುಷ ಇರಲಿ, ಆತನ ಸೌಂದರ್ಯವನ್ನು ನಿಮ್ಮ ಪ್ರಿಯಕರನ ಮುಂದೆ ಎಂದೂ ಹೊಗಳಬೇಡಿ.
ನೀನು ನನ್ನನ್ನು ಯಾಕೆ ಪ್ರೀತಿ ಮಾಡ್ತೀಯಾ ಎನ್ನುವ ಪ್ರಶ್ನೆಯನ್ನು ಪದೇ ಪದೇ ಕೇಳಬೇಡಿ. ನಿಮಗೆ ಈ ಪ್ರಶ್ನೆ ಕೇಳಲು ಖುಷಿಯಾಗಬಹುದು. ಆದ್ರೆ ಉತ್ತರ ನೀಡಲು ಬಾಯ್ ಫ್ರೆಂಡ್ ಇಷ್ಟಪಡುವುದಿಲ್ಲ. ಅದು ಅವರಿಗೆ ಕಿರಿಕಿರಿಯಾಗುತ್ತದೆ.
ಬಾಯ್ ಫ್ರೆಂಡ್ ಕ್ಷಮೆ ಕೇಳಿಲ್ಲ ಅಂತಾ ಒತ್ತಡ ಹೇರಬೇಡಿ. ನೀನು ಮಾಡಿದ್ದು ತಪ್ಪು, ನನ್ನ ಬಳಿ ಕ್ಷಮೆ ಕೇಳು ಎನ್ನಬೇಡಿ. ಆತನಿಗೆ ಕ್ಷಮೆ ಕೇಳಬೇಕೆನ್ನಿಸಿದ್ರೆ ಕೇಳ್ತಾನೆ. ನೀವು ಸುಮ್ಮನಿದ್ದುಬಿಡಿ.