ವಯಸ್ಸಾಗ್ತಿದ್ದಂತೆ ಕಣ್ಣಿನ ಶಕ್ತಿ ಕಡಿಮೆಯಾಗುವುದು ಸಹಜ. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಚಿಂತಿಸುವ ಅವಶ್ಯಕತೆಯಿಲ್ಲ. ವ್ಯಕ್ತಿಯ ವಯಸ್ಸು ಹೆಚ್ಚಾಗುತ್ತಿದ್ದಂತೆ, ಆತನ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಆರೋಗ್ಯದ ಸಮಸ್ಯೆಯೂ ಒಂದೊಂದಾಗಿ ಕಾಡಲು ಶುರುವಾಗುತ್ತೆ. ಅದರಲ್ಲಿ ಮುಖ್ಯವಾಗಿ ದೃಷ್ಟಿ ಸಂಬಂಧಿ ರೋಗಗಳು ಹೆಚ್ಚಾಗಿರುತ್ತೆ.
ಮುಖ್ಯವಾಗಿ ಕಣ್ಣಿನ ಪೊರೆ ಸಹಜವಾಗಿ ಎಲ್ಲರಿಗೂ ಕಾಡುವಂತಹ ಸಮಸ್ಯೆಯಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದೆ ಹೋದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ಮಧುಮೇಹ, ಬಿಪಿ, ಹೃದಯ ಸಂಬಂಧಿ ಕಾಯಿಲೆಗಳು ನಿರ್ಲಕ್ಷ್ಯದಿಂದಾಗಿಯೇ ವಕ್ಕರಿಸುವ ಖಾಯಿಲೆಗಳಾಗಿವೆ.
60-65 ವರ್ಷಗಾಳ್ತಾ ಹೋದ ಹಾಗೆ ದೃಷ್ಟಿ ಮಂಜಾಗುತ್ತ ಹೋಗುತ್ತದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೇವಿಸುವ ಆಹಾರದಲ್ಲಿಯೂ ಪೌಷ್ಠಿಕಾಂಶ ಹೇರಳವಾಗಿ ಇರುವಂತೆ ನೋಡಿಕೊಳ್ಳಬೇಕು. ಇವು ಕಣ್ಣಿಗೆ ಉತ್ತಮ ರೀತಿಯಲ್ಲಿ ರಕ್ಷಣೆ ನೀಡುತ್ತೆ.
ಕಾಲಕಾಲಕ್ಕೆ ವೈದ್ಯರ ಬಳಿ ಹೋಗಿ ಕಣ್ಣನ್ನು ಪರೀಕ್ಷೆ ಮಾಡಿಸಿಕೊಳ್ಳುತ್ತಿರಿ.
ವೈದ್ಯರು ಸೂಚಿಸುವ ಕನ್ನಡಕವನ್ನ ಮಾತ್ರ ಧರಿಸಿ.
ಬಿಸಿಲಿನಿಂದ ರಕ್ಷಿಸುವ ಕನ್ನಡಕವನ್ನ ಬಳಸುತ್ತಾ ಇರಿ
ಸಮಯಕ್ಕೆ ಸರಿಯಾಗಿ ಆಹಾರದ ಸೇವನೆ ಉತ್ತಮ. ಪೌಷ್ಠಿಕ ಆಹಾರದತ್ತ ನಿಮ್ಮ ಗಮನ ಹೆಚ್ಚಾಗಿರಲಿ.
ಧೂಮಪಾನ ಹಾಗೂ ಮದ್ಯಪಾನದಿಂದ ದೂರ ಇರಿ
ಧೂಳು ಹಾಗೂ ಬೇರೆ ಬೇರೆ ಕಲ್ಮಶಗಳು ಕಣ್ಣಿಗೆ ಸೇರದಿರುವಂತೆ ನೋಡಿಕೊಳ್ಳಿ.
ಅತಿಯಾದ ಬಿಸಿಲು, ಬೆಳಕು ಕಣ್ಣಿಗೆ ಒಳ್ಳೆಯದಲ್ಲ
ಕಣ್ಣಿಗೆ ಆದಷ್ಟು ವಿಶ್ರಾಂತಿ ಕೊಡಲು ಚೆನ್ನಾಗಿ ನಿದ್ದೆ ಮಾಡಿ.
ಇವೆಲ್ಲ ಕ್ರಮಗಳನ್ನ ಅನುಸರಿಸೋದ್ರಿಂದ ಕಣ್ಣನ್ನ ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಇವು ತುಂಬಾ ಸರಳವಾದ ಉಪಾಯಗಳಾಗಿದ್ದರಿಂದ ಯಾರೂ ಬೇಕಾದರೂ ಅಳವಡಿಸಿಕೊಳ್ಳಬಹುದು. ಹಾಗಂತ ನೀವು 60-65 ವರ್ಷಗಳಾಗುವ ತನಕ ಕಾಯಬೇಕಾಗಿಲ್ಲ. ಇಂದಿನಿಂದಲೇ ಈ ಕ್ರಮಗಳನ್ನ ಅಳವಡಿಸಿಕೊಳ್ಳಿ.