ದೇಹದಲ್ಲಿ ಜೀವ ಇರುವ ತನಕ ನೋವು ಇದ್ದೇ ಇರುತ್ತದೆ ಎಂದು ಹಿರಿಯರು ಹೇಳಿರುವುದು ನೀವು ಕೇಳಿರಬಹುದು. ಅದು ಸತ್ಯದ ಮಾತು. ದೇಹದ ಒಂದಲ್ಲ ಒಂದು ಭಾಗ ನೋಯುತ್ತಿರುತ್ತದೆ.
ಎಲ್ಲಾ ನೋವಿಗೂ ಮಾತ್ರೆಯೇ ಪರಿಹಾರವಲ್ಲ. ಮನೆಯಲ್ಲಿರುವ ಸಾಮಾಗ್ರಿಗಳನ್ನು ಬಳಸಿಯೇ ನಿಮ್ಮ ನೋವನ್ನು ಕಡಿಮೆ ಮಾಡಬಹುದು.
ಶುಂಠಿಯಲ್ಲಿ ಅತ್ಯುತ್ತಮ ನೋವು ನಿವಾರಕ ಗುಣಗಳಿವೆ. ಇದು ಮಂಡಿ ನೋವು, ಹೊಟ್ಟೆ ನೋವು, ಸ್ನಾಯುಗಳ ನೋವು ಮತ್ತು ಗ್ಯಾಸ್ಟ್ರಿಕ್ ನ ಎದೆ ನೋವನ್ನು ಕಡಿಮೆ ಮಾಡುತ್ತದೆ.
ಕಾಫಿಯಲ್ಲಿರುವ ಕೆಫೇನ್ ಅತ್ಯುತ್ತಮ ನೋವು ನಿವಾರಕವಾಗಿದ್ದು, ನೋವಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಮುಖ್ಯವಾಗಿ ತಲೆನೋವಿಗೆ ಕಾಫಿ ಸೇವನೆ ಮಾಡಿದರೆ ಸಾಕು. ಅರ್ಧ ಗಂಟೆಯೊಳಗೆ ನಿಮ್ಮ ತಲೆನೋವು ಮಾಯವಾಗುತ್ತದೆ.
ಹಲ್ಲು ನೋವು ಕಾಣಿಸಿಕೊಂಡಾಗ ಲವಂಗವನ್ನು ಹಲ್ಲು ಮತ್ತು ವಸಡುಗಳ ನಡುವೆ ಇಟ್ಟುಕೊಂಡರೆ ಸಾಕು ನೋವು ಮಾಯವಾಗುತ್ತದೆ. ಗಾಯಗಳಿಗೆ ಮೇಲ್ಭಾಗದಲ್ಲಿ ಕೊಂಚ ಅರಿಶಿನ ಪುಡಿ ಉದುರಿಸಿ ನೋಡಿ, ಬೇಗ ಗಾಯ ಕೂಡುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ.
ಮೊಸರು ಅಥವಾ ಮಜ್ಜಿಗೆ ಹೊಟ್ಟೆಯುರಿ ಅಥವಾ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾ ಜೀರ್ಣಕ್ರಿಯೆಯನ್ನು ಕಡಿಮೆ ಮಾಡಿ ಹೊಟ್ಟೆ ನೋವನ್ನು ನಿವಾರಿಸುತ್ತದೆ.