ನಿದ್ರಾಹೀನತೆಯಿಂದ ಹೊರಬರಲು ಈಗ ಸರಳವಾದ ವಿಧಾನವೊಂದರ ಬಗ್ಗೆ ತಿಳಿಯೋಣ. ಅದೇ ಯೋಗಾಸನ.
ಈ ಮೂರು ಯೋಗಾಸನವನ್ನು ಮಲಗುವ ಮುನ್ನ ಮಾಡಿ ನೋಡಿ. ಗಡದ್ದಾದ ನಿದ್ದೆ ನಿಮ್ಮದಾಗುವುದು ಖಚಿತ.
ವಿಪರೀತ ಕರಣಿ ಆಸನದಲ್ಲಿ ಮೊದಲು ಅಂಗಾತ ಮಲಗಿ. ಬೆನ್ನಿನ ಭಾಗಕ್ಕೆ ದಿಂಬು ಇಡಿ. ನಿಧಾನವಾಗಿ ಕಾಲನ್ನೆತ್ತಿ. ಭುಜದ ಭಾಗ ಮಾತ್ರ ನೆಲದಲ್ಲಿರಲಿ. ಹತ್ತು ಸೆಕೆಂಡು ಕಾಲ ಹಾಗೇ ದೇಹವನ್ನು ಮೇಲೆತ್ತಿ ಇಟ್ಟುಕೊಳ್ಳಿ. ನಿಧಾನಕ್ಕೆ ಬೆನ್ನು, ಪೃಷ್ಠ, ಕಾಲುಗಳನ್ನು ನೆಲಕ್ಕಿಳಿಸಿ. ಇದನ್ನು ಐದು ಬಾರಿ ಪುನರಾವರ್ತಿಸಿ.
ಬೆನ್ನುಮೂಳೆ ಭಾಗವನ್ನು ಸಡಿಲಗೊಳಿಸಿ ಹಿಂಭಾಗದ ಬೊಜ್ಜನ್ನು ಕರಗಿಸಲು ಕಾಲುಗಳನ್ನು ಜೋಡಿಸಿ ಹಿಂದಕ್ಕೆ ಮಡಿಚಿ. ವಜ್ರಾಸನದಲ್ಲಿ ಕುಳಿತುಕೊಳ್ಳಿ. ತಲೆ ನೇರವಾಗಿರಲಿ ಅದನ್ನು ನಿಧಾನಕ್ಕೆ ಬಗ್ಗಿಸಿ ನೆಲಕ್ಕೆ ಮುಟ್ಟಿಸಿ. 10 ಸೆಕೆಂಡ್ ಬಳಿಕ ಯಥಾಸ್ಥಿತಿಗೆ ಬನ್ನಿ.
ಕೈಗಳನ್ನು ಅಗಲಕ್ಕೆ ಚಾಚಿ, ಕಾಲು ಜೋಡಿಸಿ ಹಿಂದೆ ಮಡಚಿ, ಮೇಲೆತ್ತಿ. ತಲೆ ನೇರವಾಗಿರಲಿ, ತಲೆಯನ್ನು ಕಾಲುಗಳ ವಿರುದ್ಧ ದಿಕ್ಕಿಗೆ ತಿರುಗಿಸಿ. ಮತ್ತೊಂದು ಬದಿಗೆ ಕಾಲನ್ನು ಹೊರಳಿಸಿ ವಿರುದ್ಧ ದಿಕ್ಕಿಗೆ ತಲೆಯಿರಲಿ. ಇದನ್ನು ಮೂರು ಬಾರಿ ಪುನರಾವರ್ತಿಸಿ.
ಈ ವ್ಯಾಯಾಮವನ್ನು ಪ್ರತಿನಿತ್ಯ ಮಲಗುವ ಮುನ್ನ ಮಾಡುವುದರಿಂದ ಬೊಜ್ಜು ಕರಗುತ್ತದೆ ಮಾತ್ರವಲ್ಲ ಉತ್ತಮ ನಿದ್ರೆ ನಿಮ್ಮದಾಗುತ್ತದೆ.
(ಇದು ವಿವಿಧ ಮೂಲಗಳಿಂದ ಆಧರಿಸಿದ ಮಾಹಿತಿಯಾಗಿದ್ದು, ತಜ್ಞರ ಸೂಕ್ತ ಸಲಹೆ ಬಳಿಕವೇ ಅನುಸರಿಸುವುದು ಸೂಕ್ತ)