ಬೊಜ್ಜಿಗೆ ಕಾರಣವಾಗುವ ಹಲವು ಅಂಶಗಳ ಕುರಿತು ಅಧ್ಯಯನ ನಡೆಸಿದ ತಂಡವೊಂದು ಈ ವಿಷಯಗಳ ಬಗ್ಗೆ ಜಾಗೃತಿ ಹೊಂದಿದರೆ ಬೊಜ್ಜಿನ ಸಮಸ್ಯೆಯಿಂದ ದೂರವಿರಬಹುದು ಎಂದು ಹೇಳಿದೆ.
ದಿನಕ್ಕೆ 15ರಿಂದ 20 ನಿಮಿಷ ಅವಧಿಯನ್ನು ಬಿಸಿಲಿನಲ್ಲಿ ಕಳೆಯಿರಿ. ವಿಟಮಿನ್ ಡಿ ಮಾತ್ರೆ ಸೇವಿಸುವ ಬದಲು ಮನೆಯಿಂದ ಹೊರಗೆ ಹೋಗಿ. ಸ್ವಲ್ಪ ಮಟ್ಟಿನ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಇದರಿಂದ ದೇಹ ತೂಕವೂ ಇಳಿಯುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ.
ಕಚೇರಿ ಅಥವಾ ಶಾಲೆ-ಕಾಲೇಜಿಗೆ ಹೋಗುವಾಗ ಪ್ಲಾಸ್ಟಿಕ್ ಡಬ್ಬಿಯಲ್ಲಿ ಊಟ ಕೊಂಡೊಯ್ಯುತ್ತಿರೇ. ಈ ಅಭ್ಯಾಸವನ್ನು ಮೊದಲು ಬಿಡಿ. ಪ್ಲಾಸ್ಟಿಕ್ ಬಾಕ್ಸ್ ಮತ್ತು ಬಾಟಲಿಯ ಬಿಪಿಎ ಅಂಶವು ಆಹಾರದೊಂದಿಗೆ ಸೇರಿಕೊಂಡು ಈಸ್ಟ್ರೋಜೆನ್ ಹಾರ್ಮೋನ್ ಹೆಚ್ಚು ಬಿಡುಗಡೆ ಮಾಡುತ್ತದೆ. ಇದರಿಂದ ದೇಹದ ಕೊಬ್ಬು ಹೆಚ್ಚುತ್ತದೆ.
ತಡರಾತ್ರಿಯ ತನಕ ಕೆಲಸ ಮಾಡುವುದರಿಂದಲೂ ದೇಹದ ಕೊಬ್ಬು ಹೆಚ್ಚುತ್ತದೆ. ಕ್ಯಾಲರಿ ದಹಿಸುವ ಚಟುವಟಿಕೆಗಳು ಕಡಿಮೆಯಾದಂತೆ ಬೊಜ್ಜು ಹೆಚ್ಚುತ್ತದೆ. ಸಿಹಿತಿಂಡಿಗಳ ವಿಪರೀತ ಸೇವನೆ, ಜಂಕ್ ಫುಡ್ ಸೇವನೆ, ಅತಿಯಾದ ಮೊಬೈಲ್ ಅಡಿಕ್ಷನ್, ಡಯಟ್ ಗಾಗಿ ಊಟ ಮಾಡದೆ ಇರುವುದು ಕೂಡಾ ಸಮಸ್ಯೆಗೆ ಕಾರಣವಾಗುತ್ತದೆ.