ಕಳೆದು ಹೋದ ದಿನಗಳನ್ನು ವಾಪಸ್ ತರಲು ಸಾಧ್ಯವಿಲ್ಲ. ಆದ್ರೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಏನು ಮಾಡಬೇಕು ಗೊತ್ತಾ..? ನೀವು ಆರ್ಥಿಕವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ.
ಒಂದೇ ಕೋಣೆಯಲ್ಲಿ ಲಕ್ಷ್ಮೀ ದೇವಿಯ ಬೇರೆ ಬೇರೆ ಫೋಟೋಗಳನ್ನು ಇಡಬೇಡಿ. ಪ್ರತಿ ಶುಕ್ರವಾರ ಸಂಪತ್ತಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಿ.
ಹರಿದ ಚೀಲ ಅಥವಾ ಪರ್ಸ್ ಬಳಸಬೇಡಿ. ಇದರಿಂದ ಸಂಪತ್ತು ಬರುವ ಬದಲು ಹಣದ ಕೊರತೆ ಎದುರಾಗುತ್ತದೆ.
ಶುಕ್ರವಾರ ಲಕ್ಷ್ಮಿ ದೇವಿಯ ಪಾದದಡಿ ನಾಣ್ಯವನ್ನಿಟ್ಟು ಪೂಜೆ ಮಾಡಿ. ನಂತರ ಅದನ್ನು ಕೆಂಪು ಬಟ್ಟೆ ಅಥವಾ ಕಾಗದದಲ್ಲಿ ಸುತ್ತಿ ಹಣ ಇಡುವ ಸ್ಥಳದಲ್ಲಿಡಿ. ಹೀಗೆ ಮಾಡಿದ್ರೆ ಎಂದೂ ಹಣದ ಕೊರತೆ ಎದುರಾಗುವುದಿಲ್ಲ.
ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮುಖವನ್ನು ನೋಡಿಕೊಳ್ಳಬೇಡಿ. ಮೊದಲು ನಿಮಗೆ ಇಷ್ಟವಾದವರನ್ನು ನೆನೆದು ನಿಮ್ಮ ಎರಡೂ ಅಂಗೈ ನೋಡಿಕೊಳ್ಳಿ.
ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವ ಮುನ್ನ ಗಣಪತಿಯ ಪೂಜೆ ಮಾಡಿ. ಪ್ರತಿ ಬುಧವಾರ 5 ದರ್ಬೆಯನ್ನು ಗಣಪತಿಗೆ ಅರ್ಪಿಸಿ.
ಸೂರ್ಯ ಮುಳುಗಿದ ನಂತರ ಹಣದ ವ್ಯವಹಾರ ಮಾಡಬೇಡಿ. ಹಣವನ್ನು ಬೇರೆಯವರಿಗೆ ನೀಡಲು ಹೋಗಬೇಡಿ.
ಶನಿವಾರ ಮಾಂಸ ಹಾಗೂ ಮದ್ಯಪಾನದಿಂದ ದೂರವಿರಿ.