ನಾವೇ ಕಲಿಸಿದ್ದನ್ನು ಕಲಿಯುತ್ತಾ ಬೆಳೆಯುವ ಮಕ್ಕಳು ಯಾವುದೋ ಒಂದು ಘಟ್ಟದಲ್ಲಿ ಸುಳ್ಳು ಹೇಳುವುದನ್ನು ಕಲಿತು ಬಿಡುತ್ತದೆ. ಅದು ಯಾಕೆ ಹಾಗಾಗುತ್ತದೆ..?
ಮೂರು ವರ್ಷ ಕಳೆದ ಬಳಿಕ ಮಗು ತನ್ನ ಸುತ್ತಮುತ್ತಲಿನ ವಸ್ತು, ಜನರನ್ನು ಗಮನಿಸಿ ತಾನು ಅನುಕರಿಸಲು ಕಲಿಯುತ್ತದೆ. ಸಣ್ಣ ಪುಟ್ಟ ಸುಳ್ಳುಗಳನ್ನು ಹೇಳಿದಾಗ ನಾವು ನಕ್ಕುಬಿಟ್ಟು ಅದನ್ನು ಮರೆತು ಬಿಡುತ್ತೇವೆ. ಇದುವೇ ಮಗುವಿಗೆ ಮುಂದೆ ಹೆಚ್ಚು ಸುಳ್ಳು ಹೇಳಲು ಪ್ರೇರಣೆ ನೀಡುತ್ತದೆ ಎಂಬುದನ್ನು ನಾವು ಮರೆತು ಬಿಡುತ್ತೇವೆ.
ಅದರೆ ಒಮ್ಮೆ ಮಕ್ಕಳ ಸುಳ್ಳು ಪ್ರಶಂಸೆಗೆ ಒಳಗಾದರೆ ಅವರು ಅದನ್ನು ಸರಿಯಾಗಿ ನೆನಪಿಟ್ಟುಕೊಂಡು ಪುನರಾವರ್ತಿಸುತ್ತಾರೆ. ನಾಲ್ಕು, ಆರು ವರ್ಷಕ್ಕೇ ಅದು ಮತ್ತಷ್ಟು ಹೆಚ್ಚಿಸುತ್ತದೆ. ಸುಳ್ಳಿಗೆ ತಕ್ಕಂತೆ ಚಹರೆಗಳನ್ನು ಬದಲಾಯಿಸಲು ಕಲಿಯುತ್ತದೆ. ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತವೆ, ಹಾಗಾಗಿ ನೀವು ಮಕ್ಕಳೆದುರು ವ್ಯವಹರಿಸುವಾಗ ತಪ್ಪಿಯೂ ಸುಳ್ಳನ್ನಾಡದಿರಿ.
ಮಕ್ಕಳಿಗೆ ಕತೆ ಹೇಳುವ ಮೂಲಕ ಸುಳ್ಳು ಹೇಳುವುದು ಎಷ್ಟು ದೊಡ್ಡ ತಪ್ಪು ಎಂಬುದನ್ನು ವಿವರಿಸಿ. ತಂದೆ ತಾಯಿಗೆ ನೋವಾಗಬಾರದು ಎಂಬ ಕಾರಣಕ್ಕೂ ಸುಳ್ಳು ಹೇಳಬಾರದು ಎಂಬುದನ್ನು ಅವರಿಗೆ ತಿಳಿಹೇಳಿ.