ಕೊರೋನಾ ಬಳಿಕ ಹೆಚ್ಚಿನ ಮಂದಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದಾರೆ.
ಹಲವು ಬಗೆಯ ಕಷಾಯ, ಚಹಾಗಳನ್ನು ಮನೆಯಲ್ಲೇ ತಯಾರಿಸಿ ಕುಡಿಯುತ್ತಿದ್ದಾರೆ. ಅವುಗಳ ಪೈಕಿ ಗುಲಾಬಿ ಚಹಾ ಕೂಡಾ ಒಂದು.
ರೋಸ್ ಮುಲೇತಿ ಚಹಾದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳಿದ್ದು ಇದು ಕೆಮ್ಮು ಮತ್ತು ಶೀತವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವವರ ನೆಚ್ಚಿನ ಚಹಾವಾಗಿದೆ. ಗುಲಾಬಿ ಹೂವಿನ ಫ್ರೆಶ್ ದಳಗಳನ್ನು ಚೆನ್ನಾಗಿ ತೊಳೆದು ಒಣಗಿಸಿಡಿ. ಚಹಾ ಮಾಡುವಾಗ ನೀರಿಗೆ ಈ ದಳಗಳನ್ನು ಹಾಗೂ ಮುಲೇತಿಯನ್ನು ಸೇರಿಸಿ ಕುದಿಸಿ. ಎರಡು ನಿಮಿಷ ಕುದಿದ ಬಳಿಕ ಬೆಲ್ಲ ಅಥವಾ ಜೇನು ತುಪ್ಪ ಬೆರೆಸಿ ಕುಡಿಯಿರಿ.
ಇದು ನಿಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿರುವ ಅನಗತ್ಯ ಅಂಶಗಳನ್ನು ಹೊರಹಾಕುತ್ತದೆ. ವಾರಕ್ಕೆರಡು ದಿನ ರೋಸ್ ಟೀ ಕುಡಿಯುವುದರ ಮೂಲಕ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.