ಸಬ್ಬಕ್ಕಿ ಕಿಚಡಿ, ಪಾಯಸ ಕೇಳಿರುತ್ತೀರಾ…! ಇದೇ ಸಬ್ಬಕ್ಕಿ ಬಳಸಿ ರುಚಿಕರವಾದ ಲಡ್ಡು ಕೂಡ ಮಾಡಬಹುದು. ಮಾಡುವ ವಿಧಾನ ಸುಲಭವಿದೆ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ ಈ ಲಡ್ಡು.
ಬೇಕಾಗುವ ಸಾಮಗ್ರಿಗಳು:
ಸಬ್ಬಕ್ಕಿ – 1/2 ಕಪ್, ಸಕ್ಕರೆ – 1/8 ಕಪ್, ಏಲಕ್ಕಿ – 1/2 ಟೀ ಸ್ಪೂನ್, 1 ಟೇಬಲ್ ಸ್ಪೂನ್ – ಗೋಡಂಬಿ ಚೂರು, ತುಪ್ಪ – 1/4 ಕಪ್.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಸಣ್ಣ ಉರಿಯಲ್ಲಿ ಸಬ್ಬಕ್ಕಿಯನ್ನು 20 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಂಡು ಒಂದು ಬೌಲ್ ಗೆ ತೆಗೆದುಕೊಳ್ಳಿ. ನಂತರ ಸಕ್ಕರೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಂಡು ಸಬ್ಬಕ್ಕಿ ಪುಡಿ ಮಾಡಿಕೊಂಡ ಬೌಲ್ ಗೆ ಹಾಕಿ.
ಒಗ್ಗರಣೆ ಸೌಟಿಗೆ ಒಂದು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿಯನ್ನು ಹುರಿದುಕೊಂಡು ಸಬ್ಬಕ್ಕಿ ಮಿಶ್ರಣಕ್ಕೆ ಹಾಕಿ ಜತೆಗೆ ಏಲಕ್ಕಿ ಪುಡಿ ಸೇರಿಸಿ. ನಂತರ ಸಬ್ಬಕ್ಕಿ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಕಟ್ಟಿದರೆ ರುಚಿಕರವಾದ ಲಡ್ಡು ಸವಿಯಲು ಸಿದ್ಧ.