ನಾವು ಸಂತೋಷದಲ್ಲಿದ್ದಾಗ ಬಹಳ ಬೇಗ ಕಳೆದುಹೋಗುವ ಸಮಯ, ದುಃಖದಲ್ಲಿದ್ದ ವೇಳೆ ಬಲು ನಿಧಾನವಾಗಿ ಚಲಿಸುತ್ತದೆ ಎಂಬ ಮಾತನ್ನು ಎಲ್ಲೆಡೆ ಕೇಳುತ್ತಲೇ ಇರುತ್ತೇವೆ.
ಇದಕ್ಕೆ ಕಾರಣವೇನೆಂದು ವಿಜ್ಞಾನಿಗಳು ಪತ್ತೆ ಮಾಡಿದ್ದು, ನಮ್ಮ ಮೆದುಳಿನಲ್ಲಿ ಆಗುವ ಲೆಕ್ಕಾಚಾರಗಳಿಂದಲೇ ಹೀಗಾಗುತ್ತದಂತೆ. Journal of Neuroscienceನಲ್ಲಿ ವರದಿ ಮಾಡಲಾಗಿದ್ದ ಅಧ್ಯಯನವೊಂದರ ಪ್ರಕಾರ, ನಮ್ಮ ಮೆದುಳಿನಲ್ಲಿರುವ ನರಗಳು ಈ ರೀತಿ ಸಮಯದಲ್ಲಿ ಏರುಪೇರಾಗುವಂತಹ ಸೆನ್ಸೇಷನ್ ಸೃಷ್ಟಿಸುತ್ತವಂತೆ.
ಅಧ್ಯಯನದ ವೇಳೆ ಪಾಲ್ಗೊಂಡಿದ್ದ ಅನೇಕರ ಆಲೋಚನೆಗಳಿಗೆ ತಕ್ಕಂತೆ ಅವರ ಮೆದುಳಿನ ಸುಪ್ರಾಮಾರ್ಜಿನಲ್ ಗೈರಸ್ (SMG) ಹೆಸರಿನ ನರಗಳು ನಿರ್ಧಿಷ್ಟ ಅವಧಿಯ ಕಾಲಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ. ಈ ಕಾರಣದಿಂದ ಸಮಯವು ಬೇಗ ಹೋಗುವಂತೆಯೂ, ನಿಧಾನವಾಗಿ ಹೋಗುವಂತೆಯೂ ಕಾಣುತ್ತದೆ.