ಈಗಿನ ಜೀವನ ಶೈಲಿ, ಆಹಾರ, ಸರಿಯಾದ ವ್ಯಾಯಾಮಗಳು ಇಲ್ಲದೇ ಇರುವುದರಿಂದ ಮಹಿಳೆಯರು ಅರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಈಗ ಗರ್ಭಕೋಶದ ಫೈಬ್ರಾಯ್ಡ್ ಇಂತಹ ಸಮಸ್ಯೆಗಳಿಂದ ಕೆಲವರು ಗರ್ಭಕೋಶವನ್ನೇ ತೆಗೆದು ಹಾಕುತ್ತಾರೆ. ಕೆಲವೊಂದು ಆರೋಗ್ಯಕರವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಇಂತಹ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.
ತಿಂಗಳಿಗೆ ಸರಿಯಾಗಿ ಮುಟ್ಟು ಆಗದಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ. ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.
ಹಾಗೇ ಮುಟ್ಟಿನ ಅವಧಿಯಲ್ಲಿ ಹೆಚ್ಚು ದಿನಗಳ ಕಾಲ ರಕ್ತಸ್ರಾವವಿದ್ದರೆ ಕೂಡ ವೈದ್ಯರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಿ.
ವರ್ಷ ಮೂವತ್ತು ದಾಟಿದ ನಂತರ ವರ್ಷಕ್ಕೊಮ್ಮೆ ನಿಮ್ಮ ಆರೋಗ್ಯದ ತಪಾಸಣೆ ಮಾಡಿಕೊಳ್ಳಿ. ಇನ್ನು ಕುಳಿತು ಮಾಡುವ ಕೆಲಸ ನಿಮ್ಮದಾದರೆ ಗಂಟೆಗೊಮ್ಮೆ ಎದ್ದು 5 ನಿಮಿಷ ಓಡಾಡಿ. ಒಂದೇ ಕಡೆ ತುಂಬಾ ಹೊತ್ತು ಕುಳಿತು ಕೆಲಸ ಮಾಡಬೇಡಿ.
ನೀರು, ತಾಜಾ ಹಣ್ಣಿನ ರಸ, ಸೀಸನಲ್ ಹಣ್ಣುಗಳನ್ನು ಸೇವಿಸುತ್ತೀರಿ. ಜಂಕ್ ಫುಡ್, ಹಾಗೂ ತಡವಾಗಿ ಊಟ ಮಾಡುವುದು, ಕಡಿಮೆ ನೀರು ಕುಡಿಯುವುದು ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಡಿ.
ಯೋಗ, ಧ್ಯಾನ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನಕ್ಕೆ 20 ನಿಮಿಷವಾದರೂ ಇದಕ್ಕೆ ಸಮಯ ಕೊಡಿ.