![](https://kannadadunia.com/wp-content/uploads/2020/09/Make-Almond-Cream-Final-1024x683.jpg)
ಒಣಬೀಜಗಳ ರಾಜ ಬಾದಾಮಿಯ ಉಪಯೋಗಗಳು ಒಂದೆರಡಲ್ಲ. ಹಲವು ರೋಗಗಳಿಗೆ ರಾಮಬಾಣವಾಗಿರುವ ಬಾದಾಮಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧನೆಗೂ ಉಪಕಾರಿ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಮನೆಯಲ್ಲೇ ಇದರ ಕ್ರೀಮ್ ತಯಾರಿಸುವುದು ಹೇಗೆಂದು ನೋಡೋಣ.
ಬಾದಾಮಿಯ ಲಾಭ ಹೆಚ್ಚಿನ ಪ್ರಮಾಣದಲ್ಲಿ ನಿಮಗೆ ಸಿಗಬೇಕಾದರೆ ಅದನ್ನು ನೆನೆಸಿಟ್ಟೇ ತಿನ್ನಬೇಕು. ಕ್ರೀಮ್ ತಯಾರಿಸುವಾಗಲೂ ಅದನ್ನು ನೆನೆಸಿಡುವುದು ಬಹಳ ಮುಖ್ಯ. ರಾತ್ರಿ ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ರುಬ್ಬಿ. ಬಳಿಕ ಹಿಂಡಿ ರಸ ತೆಗೆಯಿರಿ. ಇದಕ್ಕೆ ಎರಡು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ.
ವಿಟಮಿನ್ ಇ ಕ್ಯಾಪ್ಯೂಲ್ ಒಳಗಿನ ಮಿಶ್ರಣವನ್ನೂ ಬೆರೆಸಿ. ಅಲೋವೇರಾ ಜೆಲ್ ಕೂಡಾ ಸೇರಿಸಿ. ಈ ಮಿಶ್ರಣವನ್ನು ಮುಖದ ಮೇಲೆ ಮೃದುವಾಗಿ ಮಸಾಜ್ ಮಾಡಿ. ಮಲಗುವ ವೇಳೆ ಹಚ್ಚಿ ಬೆಳಿಗ್ಗೆ ಮುಖ ತೊಳೆದುಕೊಳ್ಳಿ ಪ್ರತಿದಿನ ಈ ಕ್ರೀಮ್ ಬಳಸುವುದರಿಂದ ಒಂದು ತಿಂಗಳಲ್ಲಿ ನಿಮ್ಮ ತ್ವಚೆ ಹೊಳೆಯುತ್ತದೆ.
ಈ ಮಿಶ್ರಣದಲ್ಲಿರುವ ವಿಟಮಿನ್ ಇ ಮತ್ತು ಸಿ ತ್ವಚೆಯನ್ನು ಕಾಂತಿಯುತಗೊಳಿಸುತ್ತವೆ. ಯಾವುದೇ ಅಡ್ಡಪರಿಣಾಮಗಳಿಲ್ಲದ ಈ ಉತ್ಪನ್ನವನ್ನು ನೀವು ಫ್ರಿಜ್ ನಲ್ಲಿಟ್ಟು 20 ದಿನಗಳ ಕಾಲ ಬಳಸಬಹುದು.