
ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಸಹೋದ್ಯೋಗಿಗಳೊಂದಿಗೆ ಬೆರೆತು ನಾವು ಒಂದೇ ಮನೆಯವರಾಗಿ ಬಿಡುತ್ತೇವೆ. ಆದರೆ ಅವರೊಂದಿಗೆ ಕೆಲವಷ್ಟು ವಿಚಾರಗಳನ್ನು ಹಂಚಿಕೊಳ್ಳಬಾರದು ಎಂಬುದನ್ನು ನೆನಪಿಟ್ಟುಕೊಳ್ಳಿ.
ನಿಮ್ಮ ಸಂಬಳದ ಬಗ್ಗೆ ಅವರಿಗೆ ತಿಳಿಸದಿರಿ. ಕಚೇರಿಯ ಒತ್ತಡ, ಕೆಲಸದ ಬಗ್ಗೆ ಸಹೋದ್ಯೋಗಿಗಳ ಜೊತೆ ಹೆಚ್ಚು ಹಂಚಿಕೊಳ್ಳದಿರಿ. ನಿಮ್ಮ ಮಾಲೀಕರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರೆ ಅದನ್ನು ಹಂಚಿಕೊಳ್ಳದಿರಿ.
ವೈಯಕ್ತಿಕ ಜೀವನದ ಕುರಿತು ಅಸಕ್ತಿ ತೋರುವ ಸಹೋದ್ಯೋಗಿಗಳು ಕಡಿಮೆ. ಹಾಗಾಗಿ ಎಷ್ಟು ಮಾಹಿತಿ ಬೇಕೋ ಅಷ್ಟನ್ನೇ ಹಂಚಿಕೊಳ್ಳಿ. ಮನೆಯ, ಪ್ರೇಯಸಿಯ, ಹಣದ ಸಮಸ್ಯೆಗಳ ಕುರಿತು ಹೆಚ್ಚು ಮಾತನಾಡದಿರಿ.
ಯಾವುದಾದರೂ ಸಹೋದ್ಯೋಗಿಯ ನಡವಳಿಕೆ ಇಷ್ಟವಾಗದಿದ್ದರೆ ಅವರಿಂದ ದೂರವಿರಿ. ಹೊಂದಾಣಿಕೆ ಮಾಡಿಕೊಂಡು ಅವರೊಂದಿಗೆ ಮುಂದುವರಿಯದಿರಿ. ಇದರಿಂದ ನಿಮಗೆ ಕೆಲಸದ ಸ್ಥಳದಲ್ಲಿ ಕಿರಿಕಿರಿ ಹೆಚ್ಚಬಹುದು.
ನೀವು ಹಾಸ್ಯ ಪ್ರವೃತ್ತಿಯವರೆಂದು ಎಲ್ಲರನ್ನೂ ಕಾಲೆಳೆಯುತ್ತಿರಬೇಡಿ. ಕೆಲವರಿಗದು ಇಷ್ಟವಾಗದಿರಬಹುದು. ಸಹೋದ್ಯೋಗಿಗೆ ನಿಮ್ಮಿಂದ ಬೇಸರವಾಗದಂಥ ಹಾಸ್ಯಗಳಿಗೆ ಸೀಮಿತವಾಗಿರಿ. ಜನಾಂಗೀಯ ನಿಂದನೆ ಕುರಿತು ವಿಶೇಷವಾಗಿ ಎಚ್ಚರದಿಂದಿರಿ.