alex Certify ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಈ ಕೊರೊನಾ ಕಾಲದಲ್ಲದಂತೂ ಎಲ್ಲರೂ ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸುವವರೆ. ಪೌಷ್ಟಿಕಾಂಶ ತಜ್ಞರು  ಆರೋಗ್ಯವನ್ನು ಹೇಗೆ ಕಾಳಜಿ ಮಾಡಿಕೊಳ್ಳಬೇಕು ಎಂಬುದರ ಕುರಿತು ಒಂದಷ್ಟು ಮಾಹಿತಿ ನೀಡಿದ್ದಾರೆ.

ಸಾಕಷ್ಟು ನೀರು ಕುಡಿಯಿರಿ. ನೀವು ಕೆಲಸ ಮಾಡುವ ಸ್ಥಳದಲ್ಲಿ ಒಂದು ಬಾಟಲ್ ನೀರು ಇಟ್ಟುಕೊಳ್ಳಿ. ನಿರ್ಧಿಷ್ಟ ಸಮಯಕ್ಕೆ ಅದನ್ನು ಮುಗಿಸುವ ಯೋಜನೆ ಮೊದಲೇ ರೂಪಿಸಿಕೊಳ್ಳಿ. ದೇಹ ಡಿಹೈಡ್ರಶನ್ ಆದಂತೆ ಸಮಸ್ಯೆಗಳೂ ಹೆಚ್ಚುತ್ತವೆ. ಹಾಗಾಗಿ ದೇಹಕ್ಕೆ ಬೇಕಾದಷ್ಟು ನೀರು ಕುಡಿಯಿರಿ.

ನೀವು ಎಷ್ಟು ಕೆಫೀನ್ ಸೇವಿಸುತ್ತಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ. ರಾತ್ರಿ ವೇಳೆ ಕಾಫಿ ಕುಡಿಯುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಕಾಡಬಹುದು. ಹೆಚ್ಚುವರಿ ಕ್ರೀಮ್ ಮತ್ತು ಸಕ್ಕರೆಯ ಬಳಕೆ ಕಡಿಮೆ ಮಾಡಿ. ಇದರಿಂದ ದೇಹ ತೂಕವನ್ನೂ ನಿಯಂತ್ರಿಸಬಹುದು. ಕ್ಯಾಲೊರಿಯನ್ನು ನಿಯಂತ್ರಣದಲ್ಲಿ ಇಡಬಹುದು.

ಅರೋಗ್ಯಕರ ಉಪಹಾರವನ್ನು ಸೇವಿಸಿ. ಓಟ್ಸ್, ಹಣ್ಣುಗಳು, ಪ್ರೊಟೀನ್ ನಿಮ್ಮ ಆಹಾರದಲ್ಲಿರಲಿ. ತಿನಿಸಿನ ಬಳಿಕ ಕನಿಷ್ಠ 30 ನಿಮಿಷ ವಿಶ್ರಾಂತಿ ಪಡೆಯಿರಿ. ಭೋಜನ, ರಾತ್ರಿ ತಿಂಡಿ ಎಲ್ಲದಕ್ಕೂ ಟೈಮ್ ಟೇಬಲ್ ಸಿದ್ಧಪಡಿಸಿ. ಅದನ್ನೇ ಅನುಸರಿಸಿ.

ಜಂಕ್ ಮತ್ತು ಚಾಕೊಲೇಟ್ನಂತಹ ಪ್ರಚೋದಕ ಆಹಾರಗಳಿಂದ ದೂರವಿರಿ. ಬಿಸ್ಕೆಟ್ ಬದಲಿಗೆ ಹಣ್ಣು, ಹಸಿ ತರಕಾರಿ ಸೇವಿಸಿ. ನೀವು ತಿನ್ನುವ ಆಹಾರ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದು ನೆನಪಿರಲಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...