ಜಿಟಿಜಿಟಿ ಸುರಿಯುವ ಮಳೆಯ ಜತೆಗೆ ಹವಾಮಾನ ಕೂಡ ತಂಪಾಗಿರುತ್ತದೆ. ಅದರೆ ಇದು ತ್ವಚೆಗೆ, ತುಟಿಗಳಿಗೆ ಮತ್ತು ಆರೋಗ್ಯಕ್ಕೆ ಅಷ್ಟು ಒಳ್ಳೆಯ ಸಮಯವಲ್ಲ. ಇವೆಲ್ಲದರ ರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿದೆ.
ನಿಮ್ಮ ಡಯಟ್ ಚಾರ್ಟ್ ಅನ್ನು ಬದಲಾಯಿಸಿ. ಸರಿಯಾದ ಪೌಷ್ಟಿಕ ಅಹಾರ ಸೇವಿಸಿ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಿರಿ. ಹಣ್ಣು ಮತ್ತು ತರಕಾರಿಗಳಿಗೆ ಮೊದಲ ಅದ್ಯತೆ ನೀಡಿ.
ಮೈ ಕೈ ಒಣಗಿದಂತಾಗುವ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಹಾಗಾಗಿ ಮರೆಯದೆ ಕೋಲ್ಡ್ ಕ್ರೀಮ್ ಹಚ್ಚಿ. ಇದು ತ್ವಚೆಯ ತೇವಾಂಶವನ್ನು ಉಳಿಸುತ್ತದೆ. ಯಾವ ಕ್ರೀಮ್ ಸೂಕ್ತ ಎಂಬುದನ್ನು ನಿಮ್ಮ ವೈದ್ಯರ ಬಳಿಯೇ ಕೇಳಿ ತಿಳಿಯಿರಿ. ಕಣ್ಣುಗಳ ಸುತ್ತಲೂ ಮಾಯಿಸ್ಚರೈಸರ್ ಹಚ್ಚಿ.
ಸ್ನಾನಕ್ಕೆ ಮುನ್ನ ಆಯಿಲ್ ಮಸಾಜ್ ಮಾಡಿ. ಕನಿಷ್ಠ ಮೂವತ್ತು ನಿಮಿಷ ಬಿಟ್ಟೇ ಸ್ನಾನ ಮಾಡಿ. ಆಗದಿದ್ದರೆ ಸ್ನಾನ ಮಾಡುವ ನೀರಿಗೇ ಕೆಲವು ಹನಿ ಎಣ್ಣೆ ಸೇರಿಸಿ. ಇದು ಬೆಚ್ಚಗಿನ ನೀರಿನ ಸ್ನಾನದ ಬಳಿಕ ದೇಹ ಮತ್ತಷ್ಟು ಒಣಗುವುದನ್ನು ತಡೆದು ತೇವಾಂಶವನ್ನು ಉಳಿಸುತ್ತದೆ.