ಸ್ಟ್ರಾಬೆರಿ ನೋಡಲು ಆಕರ್ಷಕ ಮಾತ್ರವಲ್ಲ, ಅಷ್ಟೇ ರುಚಿ ಹಾಗೂ ಆರೋಗ್ಯಕಾರಿ ಅಂಶವನ್ನು ಹೊಂದಿದೆ. ಈ ಹಣ್ಣಿನಲ್ಲಿ ಕಾರ್ಬೋ ಹೈಡ್ರೇಟ್, ಪ್ರೊಟೀನ್, ಕಬ್ಬಿಣ, ಪೊಟ್ಯಾಷಿಯಂ, ಮ್ಯಾಗ್ನಿಶಿಯಂ ಮತ್ತು ಪೆಂತೋಟೇನಿಕ್ ಆಮ್ಲಗಳು ಇವೆ.
ಸೇಬು ಹಣ್ಣು, ಬಾಳೆ ಹಣ್ಣು, ಕಿತ್ತಳೆ ಮುಂತಾದವುಗಳಿಗೆ ಹೋಲಿಕೆ ಮಾಡಿದರೆ ಸ್ಟ್ರಾಬೆರಿ ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಕೊಬ್ಬು ಕಡಿಮೆಯಾಗುತ್ತದೆ.
ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನುವುದರಿಂದ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಯಸ್ಸಾಗುತ್ತ ಹೋದಂತೆ ಕಣ್ಣಿನ ಪೊರೆ ಬೆಳೆಯುತ್ತಾ ಹೋಗುತ್ತದೆ. ಇದರ ನಿವಾರಣೆಗೆ ಸ್ಟ್ರಾಬೆರಿ ಸೇವಿಸಬಹುದು.
ಗರ್ಭಿಣಿಯರು ಸ್ಟ್ರಾಬೆರಿ ಹಣ್ಣುಗಳನ್ನು ಸೇವಿಸುವುದರಿಂದ ಅವರಿಗೆ ವಿಟಮಿನ್ ಬಿ ಮತ್ತು ಜೀವಸತ್ವ ಸಿಗುತ್ತದೆ. ಶಿಶುವಿನ ಮೆದುಳು ಮತ್ತು ಬೆನ್ನು ಹುರಿಯು ಚೆನ್ನಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.
ಸ್ಟ್ರಾಬೆರಿ ಹಣ್ಣು ಚರ್ಮದ ರಕ್ಷಣೆ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯಕ್ಕೆ ಆಮ್ಲಜನಕವನ್ನು ಹೀರಿಕೊಳ್ಳುವ ಶಕ್ತಿಯನ್ನು ಹೆಚ್ಚುತ್ತದೆ.