ಫಿಗರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕ್ತಾರೆ. ಆದ್ರೆ ಈ ಸುದ್ದಿ ಓದಿದ ನಂತ್ರ ಯಾವುದೇ ಮುಜುಗರವಿಲ್ಲದೇ ಸ್ತನ್ಯಪಾನ ಮಾಡಿಸ್ತಾರೆ.
ಸ್ತನ್ಯಪಾನದ ಬಗ್ಗೆ ಅಧ್ಯಯನ ಸಂಸ್ಥೆಯೊಂದು ಮಹತ್ವದ ವಿಷಯವನ್ನು ಹೊರಹಾಕಿದೆ. ಸ್ತನ್ಯಪಾನ ಮಕ್ಕಳ ಆರೋಗ್ಯಕ್ಕೊಂದೇ ಅಲ್ಲ ತಾಯಿಯ ಆರೋಗ್ಯ ವೃದ್ಧಿಗೂ ಒಳ್ಳೆಯದು ಎನ್ನುವ ಮಾಹಿತಿಯನ್ನು ನೀಡಿದೆ. ಸ್ತನ್ಯಪಾನದಿಂದ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಬರುವುದಿಲ್ಲ. ಹಾಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ನಿಯಂತ್ರಣಕ್ಕೆ ಬರುತ್ತದೆಯಂತೆ.
ಈ ಅಧ್ಯಯನದಲ್ಲಿ ಮಹಿಳೆಯರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಒಂದು ಗುಂಪಿನ ಮಹಿಳೆಯರು ಪ್ರತಿದಿನ ಅನೇಕ ಬಾರಿ ಸ್ತನ್ಯಪಾನ ಮಾಡಿಸ್ತಾ ಇದ್ರು. ಇನ್ನೊಂದು ಗುಂಪಿನ ಮಹಿಳೆಯರು ಕೇವಲ ಒಂದು ಬಾರಿ ಮಾತ್ರ ಮಾಡಿಸ್ತಾ ಇದ್ದರು. ಅನೇಕ ಬಾರಿ ಹಾಲುಣಿಸುವ ಮಹಿಳೆಯರ ಹೃದಯ ಇನ್ನೊಂದು ಗುಂಪಿನ ಮಹಿಳೆಯರಿಗಿಂತ ಹೆಚ್ಚು ಆರೋಗ್ಯವಾಗಿತ್ತು.
64 ವರ್ಷದೊಳಗೆ ಕಂಡು ಬರುವ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆಯಂತೆ. 45 ವರ್ಷ ಮೇಲ್ಪಟ್ಟ 785 ಮಹಿಳೆಯರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಸ್ತನ್ಯಪಾನದ ವೇಳೆ ಹೊರಬರುವ ಹಾರ್ಮೋನ್ ಮಹಿಳೆಯರನ್ನು ಆರೋಗ್ಯವಂತರನ್ನಾಗಿಸುತ್ತದೆ ಎಂದು ಅಧ್ಯಯನ ಹೇಳಿದೆ.