ಕಾಲು ನೋವು ಕೀಲುನೋವು ಸಮಸ್ಯೆ ಇರದವರು ಇರಲಿಕ್ಕಿಲ್ಲವೇನೋ. ಪ್ರಾಯ 40 ರ ಗಡಿ ತಲುಪುತ್ತಿದ್ದಂತೆ ಈ ನೋವು ಜೀವ ಹಿಂಡುತ್ತದೆ. ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಳಿತಿರುವುದರಿಂದ ಕೀಲುನೋವು ಬರುತ್ತದೆ.
ಇದಕ್ಕೆ ಬೆಳ್ಳುಳ್ಳಿ ಮದ್ದಾಗಬಲ್ಲದು. ಎರಡು ಲೋಟ ನೀರಿಗೆ ಅರ್ಧ ಚಮಚ ಅರಿಷಿಣ ಮತ್ತು ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಅದನ್ನು ಮಿಶ್ರಣ ಮಾಡಿ 8 ರಿಂದ 9 ನಿಮಿಷ ಬಿಸಿಮಾಡಿ. ನಂತರ ಇದಕ್ಕೆ ಜೇನುತುಪ್ಪ ಬೆರೆಸಿ. ಈ ಮಿಶ್ರಣವನ್ನು ದಿನಾ ಬೆಳಿಗ್ಗೆ ಸೇವಿಸುವುದು ಬಹಳ ಒಳ್ಳೆಯದು.
ಜೇನುತುಪ್ಪದಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟ್ಯಾಷಿಯಮ್ ಇದ್ದು, ಇದು ನಮ್ಮ ಶರೀರವನ್ನು ಆರೋಗ್ಯವಾಗಿಡುತ್ತದೆ.
ನೀರಿನಲ್ಲಿ 10 ಬೆಳ್ಳುಳ್ಳಿ ಬೀಜಗಳನ್ನು ಹಾಕಿ ಬೇಯಿಸಿ. ನಂತರ ಹಾಲು ಬೆರೆಸಿ ಕುಡಿಯಿರಿ. ಇದರಿಂದ ಕೀಲುನೋವಿನಿಂದ ಮುಕ್ತಿ ಪಡೆಯಬಹುದು.
ಬೆಳ್ಳುಳ್ಳಿ ಬೀಜಗಳನ್ನು ಎಣ್ಣೆಯಲ್ಲಿ ಬೇಯಿಸಿ ಕೀಲುನೋವು ಹೆಚ್ಚಾಗಿ ಇರುವ ಜಾಗದಲ್ಲಿ ಹಚ್ಚಿ ನಿಧಾನವಾಗಿ ಉಜ್ಜುವುದರಿಂದ ನೋವು ಕಡಿಮೆ ಆಗುತ್ತದೆ.