alex Certify ಮಗುವಿಗೆ ಬಟ್ಟೆಯ ʼಡೈಪರ್ʼ ಬಳಕೆಯೇ ಬೆಸ್ಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಬಟ್ಟೆಯ ʼಡೈಪರ್ʼ ಬಳಕೆಯೇ ಬೆಸ್ಟ್….!

ಹಗಲಿನ ವೇಳೆ ಡೈಪರ್ ಬಳಕೆ ಮಾಡದ ಪೋಷಕರು ರಾತ್ರಿ ಮಗು ನೆಮ್ಮದಿಯಿಂದ ಮಲಗಲಿ ಎಂಬ ಕಾರಣಕ್ಕೆ ಬಹುವಾಗಿ ಅದನ್ನು ಬಳಸುತ್ತಾರೆ. ರಾಸಾಯನಿಕಗಳ ಬಳಕೆಯಿಂದ ಮಗುವಿಗೆ ತುರಿಕೆಯಂಥ ಕಿರಿಕಿರಿ, ತೇವಾಂಶದ ಅನುಭವ ಆಗುವುದರಿಂದ ಮಕ್ಕಳು ಅಳಲು ಅರಂಭಿಸುತ್ತವೆ. ಇದನ್ನು ತಪ್ಪಿಸಲು ಹೀಗೆ ಮಾಡಿ.

ಪ್ರಸ್ತುತ ಲಭ್ಯವಿರುವ ಡಿಸ್ಪೊಸೆಬಲ್ ಡೈಪರ್ ಗಿಂತಲೂ ಬಟ್ಟೆಯ ಡೈಪರ್ ಗಳನ್ನು ಬಳಸುವುದು ಬಹಳ ಒಳ್ಳೆಯದು. ಇದರ ಬಳಕೆಯಿಂದ ತ್ವಚೆಯ ಮೇಲೆ ಯಾವುದೇ ಕಲೆ ಅಥವಾ ಗುಳ್ಳೆಗಳು ಮೂಡುವುದಿಲ್ಲ. ಇದು ಮಗುವಿಗೆ ಅರಾಮದಾಯಕ ಅನುಭವ ನೀಡುತ್ತದೆ.

ಬಟ್ಟೆಯ ಡೈಪರ್ ಗಳ ಬಳಕೆಯೂ ಬಲು ಸುಲಭ. ಮಗು ಮೂತ್ರ ಅಥವಾ ಮಲ ವಿಸರ್ಜನೆ ಮಾಡಿಕೊಂಡರೆ ಅದನ್ನು ಬದಲಾಯಿಸುವುದು ಪೋಷಕರಿಗೆ ಸುಲಭ. ಸೂಕ್ತ ಗಾತ್ರದಲ್ಲಿ, ಅಕಾರದಲ್ಲಿ ಸೊಂಟಕ್ಕೆ ಸರಿಯಾಗಿ ನಿಲ್ಲುವಂತೆ, ಕಾಲುಗಳು ಸರಿಯಾಗಿ ಸೇರಿಕೊಳ್ಳುವಂತೆ ಇದನ್ನು ತಯಾರಿಸಲಾಗುತ್ತಿದೆ.

ಇದರ ಕೊಳ್ಳುವಿಕೆಯೂ ಬಲು ದುಬಾರಿ ಏನಲ್ಲ. ಪರಿಸರ ಸ್ನೇಹಿ ಈ ಡೈಪರ್ ಗಳನ್ನು ಒಮ್ಮೆ ಬಳಸಿ ನಂತರ ಶುದ್ಧವಾಗಿ ತೊಳೆದುಕೊಂಡು ಬಳಿಕ ಮತ್ತೆ ಬಳಸಬಹುದು. ಡಿಸ್ಪೊಸೆಬಲ್ ಡೈಪರ್ ನಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ. ಅದರೆ ಬಟ್ಟೆಯ ಬಳಕೆಯಿಂದ ಆ ಕಿರಿಕಿರಿಯೂ ಇರಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...