ಲೂಸ್ ಮೋಷನ್ ಉಂಟಾದಾಗ ಸಾಕಷ್ಟು ಜನರು ಮೊಸರು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಯಾಕೆ ಮೊಸರು ಸೇವಿಸಬೇಕೆಂದರೆ ಅದರಲ್ಲಿ ಜೀರ್ಣವಾಗುವ ಬ್ಯಾಕ್ಟೀರಿಯಾಗಳು ಇವೆ. ಇದು ಆಹಾರವನ್ನು ಜೀರ್ಣಗೊಳಿಸುತ್ತದೆ. ಅತಿಸಾರ ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತವೆ.
ಮೊಸರಿನಲ್ಲಿರುವ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳು ದೇಹದಲ್ಲಿ ಲ್ಯಾಟಿಕ್ ಆಮ್ಲವನ್ನು ಉತ್ಪಾದನೆ ಮಾಡುತ್ತದೆ. ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಮೊಸರಿಗೆ ಮೆಂತ್ಯೆ ಪೌಡರ್ ಹಾಗೂ ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಬೇಕು.
ಲೂಸ್ ಮೋಷನ್ ಆದಾಗ ಎಳನೀರು ಉತ್ತಮವಾದ ಮನೆ ಮದ್ದಾಗಿದೆ. ಎಳನೀರು ದೇಹಕ್ಕೆ ಬೇಕಾಗುವ ಎಲ್ಲಾ ಪೌಷ್ಟಿಕಾಂಶಗಳನ್ನು ಒದಗಿಸಿ ಕೊಡುತ್ತದೆ.
ಲೂಸ್ ಮೋಷನ್ ಆದಾಗ ಉತ್ತಮವಾದ ಮನೆಮದ್ದು ಎಂದರೆ ಅದು ನಿಂಬೆ ರಸದ ಪಾನಕ. ಒಂದು ಲೋಟ ನೀರಿಗೆ ನಿಂಬೆ ರಸವನ್ನು ಸೇರಿಸಿ ಉಪ್ಪು, ಸಕ್ಕರೆ ಹಾಕಿ ಕಲಸಿ ಕುಡಿಯಬೇಕು.