ನವಜಾತ ಶಿಶುವಿಗೆ ಜಾಂಡೀಸ್ ಬರದಂತೆ ತಡೆಯಲು ಹೀಗೆ ಮಾಡಿ

ಗರ್ಭಿಣಿಯರು ತಮ್ಮ ಗರ್ಭಾವಸ್ಥೆ ಸಮಯದಲ್ಲಿ ಮೂಲಂಗಿ ಬಳಸುವುದರಿಂದ ಆಕೆಗೆ ಮಾತ್ರವಲ್ಲ, ಹುಟ್ಟಲಿರುವ ಮಗುವಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಲಂಗಿಯಲ್ಲಿ ಹೆಚ್ಚು ಫೈಬರ್ ಅಂಶ ಇರುತ್ತದೆ, ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಗುವಿನ ಮೂಳೆ ಬೆಳವಣಿಗೆಯನ್ನು ಉತ್ತೇಜಿಸಲು ಬೇಕಾಗುವ ಕ್ಯಾಲ್ಸಿಯಂ, ಪೊಟ್ಯಾಷಿಯಂ ಇತರ ಖನಿಜಾಂಶಗಳು ಮೂಲಂಗಿಯಲ್ಲಿವೆ. ಗರ್ಭಿಣಿ ಮಹಿಳೆಯರು ಮೂಲಂಗಿ ಸೇವಿಸುವುದರಿಂದ ಮಗುವಿಗೆ ಜಾಂಡೀಸ್ ಬರದಂತೆ ತಡೆಯಬಹುದು.

ತಿಂಗಳಲ್ಲಿ ಎರಡು ಬಾರಿಯಾದರೂ ಮೂಲಂಗಿಯನ್ನು ಸೇವಿಸಿ. ಇದರಿಂದ ಫೋಲಿಕ್ ಆಮ್ಲ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಆದರೆ ತರಕಾರಿ ಬೇಯಿಸಿದಾಗ ಫೋಲಿಕ್ ಆಮ್ಲ ಆವಿಯಾಗಿ ಹೋಗುತ್ತದೆ. ಆದ್ದರಿಂದ ಹಸಿ ತರಕಾರಿಯನ್ನು ತಿನ್ನಬೇಕು.

ಮೂಲಂಗಿ ಹಸಿವನ್ನು ಹೆಚ್ಚಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಸೂಕ್ತವಾದ ಔಷಧಿ ಗುಣಗಳನ್ನು ಮೂಲಂಗಿ ಹೊಂದಿದೆ. ರೋಗ ನಿರೋಧಕ ಶಕ್ತಿಯನ್ನು ಉತ್ಪಾಧಿಸಲು ಸಹಾಯವಾಗಿದೆ. ಆದ್ದರಿಂದ ಗರ್ಭಿಣಿಯರು ಮೂಲಂಗಿಯನ್ನು ಸೇವಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read