ಭಾರತೀಯ ಸಂಪ್ರದಾಯದಲ್ಲಿ ಉಪವಾಸಕ್ಕೆ ಮಹತ್ವವಾದ ಸ್ಥಾನವಿದೆ. ಈ ಅಭ್ಯಾಸ ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಮನಸ್ಸಿನ ಸಮತೋಲನ ಹಾಗೂ ಶಾಂತಿಯನ್ನು ಕಾಪಾಡುತ್ತದೆ.
ದೀರ್ಘ ಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪ್ರಮುಖವಾಗಿ ಸಂಧಿವಾತದಂಥ ಸಮಸ್ಯೆಗಳಿಗೆ ಉಪವಾಸ ಮಾಡುವುದು ಅತ್ಯುತ್ತಮ ಪರಿಹಾರ.
ಉಪವಾಸ ಮಾಡುವುದೆಂದರೆ ಕ್ಯಾಲೋರಿಗಳಿಗೆ ಕಡಿವಾಣ ಹಾಕುವುದು. ಇದರಿಂದ ಅಧಿಕ ರಕ್ತದೊತ್ತಡ ಮತ್ತು ಚಯಾಪಚಯ ಸಮಸ್ಯೆಗಳು ಉರಿಯೂತದ ಕಾಯಿಲೆಗಳು ಮಾನಸಿಕ ಅಸ್ವಸ್ಥತೆಗಳು ಮತ್ತು ಆಟೋಪಿಕ್ ಸಮಸ್ಯೆಗಳಿಗೆ ವೈದ್ಯಕೀಯ ಪ್ರಯೋಜನ ಸಿಗುತ್ತದೆ.
ಇದನ್ನು ಕ್ರಮಬದ್ದವಾಗಿ ಆಚರಿಸಿದರೆ ಹೊಸ ಚೈತನ್ಯ ಮೂಡುವುದಲ್ಲದೆ ದೇಹ ಫ್ರೆಶ್ ಆಗುತ್ತದೆ.
ಉಪವಾಸ ಅವಧಿಯಲ್ಲಿ ತಾಜಾ ಹಣ್ಣಿನ ಜ್ಯೂಸ್, ಜೇನುತುಪ್ಪ, ನಿಂಬೆ ಹಣ್ಣಿನ ರಸ ಮತ್ತು ಹಸಿ ತರಕಾರಿಗಳ ಸೂಪ್ ಅನ್ನು ಸೇವಿಸುವುದು ಉತ್ತಮ. ಹೀಗೆ ಮಾಡುವುದರಿಂದ ದಿನಕ್ಕೆ ಮುನ್ನೂರು ಕ್ಯಾಲೋರಿ ಮಾತ್ರ ದೇಹದಲ್ಲಿ ಉಳಿದುಕೊಳ್ಳುತ್ತದೆ.