ಜಿರಳೆ ಎಂದಾಕ್ಷಣ ಮುಖ ಕಿವುಚಿಕೊಳ್ಳುತ್ತಿದ್ದೀರಾ…? ಅಡುಗೆ ಮನೆಯಲ್ಲಿ ಇವುಗಳ ಕಾಟ ಹೆಂಗಳೆಯರಿಗಷ್ಟೇ ಗೊತ್ತು. ಎಷ್ಟೇ ಕ್ಲೀನ್ ಮಾಡಿ ಇಟ್ಟರೂ ಬೆಳಿಗ್ಗೆ ಎದ್ದು ನೋಡುವಾಗ ಅಡುಗೆ ಮನೆ ಶೆಲ್ಪ್, ಕಸದ ಡಬ್ಬಿ ಹೀಗೆ ಎಲ್ಲೆಂದರಲ್ಲಿ ಓಡಾಡುತ್ತಲೇ ಇರುತ್ತವೆ. ಈ ಜಿರಳೆಯ ಸಮಸ್ಯೆ ನಿವಾರಿಸಿಕೊಳ್ಳಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಗ್ಲಾಸ್ ನೀರನ್ನು ಒಂದು ಪಾತ್ರೆಗೆ ಹಾಕಿ ಗ್ಯಾಸ್ ಮೇಲೆ ಇಡಿ. ಇದು ಕುದಿ ಬರುತ್ತಿದ್ದಂತೆ ಅದಕ್ಕೆ 4 ಪಲಾವ್ ಎಲೆಯನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ 5 ನಿಮಿಷಗಳ ಕಾಲ ಕುದಿಸಿ.
ನಂತರ ಒಂದು ಪಾತ್ರೆಗೆ ಸೋಸಿಕೊಳ್ಳಿ. ಇದು ಸ್ವಲ್ಪ ತಣ್ಣಗಾದ ಮೇಲೆ ಇದಕ್ಕೆ 3 ಚಮಚದಷ್ಟು ಕಹಿಬೇವಿನ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಸ್ಪ್ರೆ ಬಾಟಲಿಗೆ ತುಂಬಿಸಿಕೊಂಡು ಅಡುಗೆ ಮನೆ ಸಿಂಕ್, ಶೆಲ್ಪ್ , ಬಾತ್ ರೂಂ ಸಿಂಕ್ ಬಳಿ ರಾತ್ರಿ ಸ್ಪ್ರೇ ಮಾಡಿ ಇಡಿ. ಇದರಿಂದ ಜಿರಳೆ ಕಾಟ ತಪ್ಪುತ್ತದೆ.
ಇನ್ನು ಬೊರಿಕ್ ಆಸಿಡ್ ಪೌಡರ್ ಅನ್ನು ಕಸದ ಡಬ್ಬಿಗೆ ಸ್ವಲ್ಪ ಸಿಂಪಡಿಸಿ. ಇದರಿಂದ ಕೂಡ ಜಿರಳೆಗಳು ಓಡಿ ಹೋಗುತ್ತದೆ.
ತಿಂಗಳಿಗೊಮ್ಮೆ ಅಡುಗೆ ಮನೆ ಶೆಲ್ಪ್ ಕ್ಲೀನ್ ಮಾಡಿ. ಶೆಲ್ಪ್ ಬಳಿ ಪಲಾವ್ ಎಲೆಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಇಡಿ. ಇದರ ವಾಸನೆಗೆ ಜಿರಳೆಗಳು ಬರುವುದು ಕಡಿಮೆಯಾಗುತ್ತದೆ.