ಮಕ್ಕಳು ಸೊಪ್ಪಿನ ಪಲ್ಯ, ಸಾಂಬಾರು ತಿನ್ನುವುದಕ್ಕೆ ಕೇಳುವುದಿಲ್ಲ. ಹಾಗಾಗಿ ಅವರಿಗೆ ಪಾಲಕ್ ಸೊಪ್ಪಿನ ಚಪಾತಿ ಮಾಡಿಕೊಡಿ. ಇದು ಕಲರ್ ಫುಲ್ ಆಗಿರುವುದರಿಂದ ತಿನ್ನುವುದಕ್ಕು ಚೆನ್ನಾಗಿರುತ್ತದೆ. ಅವರ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು-1 ಕಪ್, ಪಾಲಕ್-1/2 ಕಪ್ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಕ್ಯಾರೆಟ್ – 1/4 ಕಪ್ ತುರಿದದ್ದು, ಉಪ್ಪು – ಚಿಟಿಕೆ, ತುಪ್ಪ – 3 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಒಂದು ಬೌಲ್ ಗೆ ಗೋಧಿಹಿಟ್ಟು ಕ್ಯಾರೆಟ್ ತುರಿ, ಪಾಲಕ್ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಚಪಾತಿ ಲಟ್ಟಿಸಿ ಎರಡು ಕಡೆ ಬೇಯಿಸಿ. ಬೇಯಿಸುವಾಗ ಒಂದು ಸ್ಪೂನ್ ತುಪ್ಪ ಹಾಕಿ.