ಹಬ್ಬ ಹರಿದಿನಗಳಲ್ಲಿ ಅಷ್ಟದ್ರವ್ಯವನ್ನು ತಯಾರಿಸಿ ಪ್ರಸಾದದ ರೂಪದಲ್ಲಿ ವಿತರಿಸುವುದು ಸಾಮಾನ್ಯ. ಹಾಗಾದರೆ ಅಷ್ಟದ್ರವ್ಯವನ್ನು ತಯಾರಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ ನೋಡಿ.
ಬೇಕಾಗುವ ಪದಾರ್ಥಗಳು
ಅರಳು ಹಾಗು ಅವಲಕ್ಕಿ- ತಲಾ 4 ಕಪ್
ಬೆಲ್ಲದ ಪುಡಿ ಹಾಗೂ ಕಾಯಿತುರಿ – ತಲಾ 3 ಕಪ್
ಬಾಳೆಹಣ್ಣು- 5
ಹುರಿದ ಎಳ್ಳು – 4
ಜೇನುತುಪ್ಪ ಹಾಗೂ ತುಪ್ಪ – ತಲಾ 2 ಚಮಚ
ಕಬ್ಬು-2 ಗಂಟು
ಬೆಂಕಿಯಲ್ಲಿ ಸುಟ್ಟ ಹಲಸಿನ ಬೀಜ – 5
ತಯಾರಿಸುವ ವಿಧಾನ
ಕಬ್ಬಿನ ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ. ಬಾಳೆಹಣ್ಣಿನ ಸಿಪ್ಪೆ ಸುಲಿದು ಗಾಲಿಗಳನ್ನಾಗಿ ಕತ್ತರಿಸಿ. ಕಾಯಿ ತುರಿಗೆ ಬೆಲ್ಲವನ್ನು ಸೇರಿಸಿ ಮಿಶ್ರಗೊಳಿಸಿ.
ಬಳಿಕ ಅವಲಕ್ಕಿ ಸೇರಿಸಿ ಚೆನ್ನಾಗಿ ಕಲೆಸಿದ ನಂತರ ಅರಳು, ಎಳ್ಳು, ಜೇನು, ತುಪ್ಪ, ಹಲಸಿನ ಬೀಜ ಹಾಕಿ ಮತ್ತೆ ಕಲೆಸಿ, ಬಾಳೆಹಣ್ಣು ಸೇರಿಸಿ ಕೈಯಾಡಿಸಿ. ಕೊನೆಗೆ ಚಿಕ್ಕದಾಗಿ ತುಂಡು ಮಾಡಿದ ಕಬ್ಬು ಸೇರಿಸಿ.