ಬದುಕುವಷ್ಟು ದಿನ ಆರೋಗ್ಯಕರವಾಗಿ ಬಾಳಲು ಬೇಕಾದ ಕೆಲವು ಆರೋಗ್ಯ ಸೂತ್ರಗಳನ್ನು ತಿಳಿದುಕೊಳ್ಳೋಣ.
ಪ್ರತಿ ದಿನವು ಸೂರ್ಯ ಹುಟ್ಟುವುದಕ್ಕಿಂತ ಮುಂಚೆಯೇ ಏಳಬೇಕು. ಕನಿಷ್ಠ ಆರು ಗಂಟೆಗೆ ಎದ್ದು ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು.
ಹದಿನೈದು ನಿಮಿಷ ವ್ಯಾಯಾಮ ಮಾಡಬೇಕು. ಪ್ರಾಣಾಯಾಮ ಮಾಡಬೇಕು. ಇದರಿಂದ ಒತ್ತಡ ಮತ್ತು ಖಿನ್ನತೆ ಕಡಿಮೆಯಾಗುತ್ತದೆ. ನಂತರ ಬೇವಿನ ಕಷಾಯ ಮಾಡಿ ಕುಡಿಯಬೇಕು. ಒಳ್ಳೆಯ ಆಹಾರ ಸೇವಿಸಬೇಕು. ಜಂಕ್ ಫುಡ್ ತಿನ್ನಬಾರದು. ಅಡುಗೆಯಲ್ಲಿ ಮೈದಾ ಮತ್ತು ಸಕ್ಕರೆಯನ್ನು ಬಳಸಬಾರದು.
ವಿಟಮಿನ್ ಸಿ ಇರುವ ಆಹಾರ ಮತ್ತು ಹಣ್ಣುಗಳನ್ನು ಸೇವಿಸಬೇಕು. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಹಣ್ಣು, ತರಕಾರಿ ಮತ್ತು ಹಸಿರು ಸೊಪ್ಪನ್ನು ಹೆಚ್ಚಾಗಿ ಸೇವಿಸಬೇಕು. ಅಡುಗೆಯಲ್ಲಿ ಶುದ್ಧವಾದ ಅರಿಶಿನ ಪುಡಿ, ಜೀರಿಗೆ, ಕಾಳು ಮೆಣಸು, ಶುಂಠಿ, ಬೆಳ್ಳುಳ್ಳಿ ಮತ್ತು ಲವಂಗವನ್ನು ಹೆಚ್ಚಾಗಿ ಬೆಳೆಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹಾಗೆಯೇ ಕಾಲ ಕಾಲಕ್ಕೆ ದೊರೆಯುವ ಹಣ್ಣು, ತರಕಾರಿಗಳ ನಿಯಮಿತ ಬಳಕೆ, ಪ್ರತಿನಿತ್ಯ ಸಾಕಷ್ಟು ನೀರು, ಎಳನೀರು ಕುಡಿಯುವುದರಿಂದ ಆರೋಗ್ಯಯುತವಾಗಿ ಇರಬಹುದು.