alex Certify ಮನೆಯಲ್ಲೇ ಸುಲಭವಾಗಿ ತಯಾರಿಸಿ ‘ಬಯೋ ಎಂಜೈಮ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಸುಲಭವಾಗಿ ತಯಾರಿಸಿ ‘ಬಯೋ ಎಂಜೈಮ್’

ಅಡುಗೆ ಮನೆ ಕಟ್ಟೆಯಿಂದ ಹಿಡಿದು ಬಾತ್ ರೂಂ ತನಕನೂ ಕ್ಲೀನ್‌ ಮಾಡಲು  ನಾವು ಇಂದು ನಾನಾ ರೀತಿಯ ಕೆಮಿಕಲ್ ಉಪಯೋಗಿಸುತ್ತೇವೆ. ಯಾವುದ್ಯಾವುದೋ ಬ್ರಾಂಡ್ ನ ಕೆಮಿಕಲ್ಸ್ ನ ತಂದು ರಾಶಿ ರಾಶಿಯಾಗಿ ಮನೆಯಲ್ಲಿ ಪೇರಿಸಿಟ್ಟುಕೊಂಡು ಬಳಸುತ್ತೇವೆ. ಇದರ ಬದಲು ಮನೆಯಲ್ಲಿಯೇ ಕೆಲವೊಂದು ಹಣ್ಣಿನ ಸಿಪ್ಪೆಗಳನ್ನು ಉಪಯೋಗಿಸಿಕೊಂಡು ನೈಸರ್ಗಿಕವಾದ ಕ್ಲೆನ್ಸರ್ಸ್ ಅನ್ನು ತಯಾರು ಮಾಡಬಹುದು. ಇದನ್ನು ಬಯೋ ಎಂಜೈಮ್ ಎಂದು ಕರೆಯುತ್ತಾರೆ. ಮಾಡುವ ವಿಧಾನ ಕೂಡ ತುಂಬಾ ಸುಲಭವಿದೆ.

ಬೆಲ್ಲ-1 ಕಪ್, ಯಾವುದಾದರೂ ಸಿಟ್ರಸ್ ಹಣ್ಣಿನ ಸಿಪ್ಪೆ (ಮೂಸಂಬಿ, ಲಿಂಬೆ, ಕಿತ್ತಳೆ)-3 ಕಪ್, ನೀರು-10 ಕಪ್, ಡ್ರೈ ಈಸ್ಟ್-1/4 ಟೀ ಸ್ಪೂನ್.

ಮೊದಲಿಗೆ ಒಂದು ಪ್ಲಾಸ್ಟಿಕ್ ಡಬ್ಬ ತೆಗೆದುಕೊಳ್ಳಿ. ಅದಕ್ಕೆ 10 ಕಪ್ ನೀರು ಹಾಕಿ ನಂತರ 3 ಕಪ್ ಹಣ್ಣಿನ ಸಿಪ್ಪೆ, 1 ಕಪ್ ಬೆಲ್ಲ , ಈಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ. ದಿನಕ್ಕೆ ಒಂದು ಸಲ ಡಬ್ಬದ ಬಾಯಿ ಮುಚ್ಚಳ ತುಸು ಸಡಿಲಗೊಳಿಸಿ ಮತ್ತೆ ಟೈಟ್ ಆಗಿ ಮುಚ್ಚಿ. ಹೀಗೆ 4 ವಾರಗಳ ಕಾಲ ಇದನ್ನು ಡಬ್ಬದಲ್ಲಿಯೇ ಇಡಿ. ಚೆನ್ನಾಗಿ ಪರ್ಮೆಂಟೇಷನ್ ಆಗುತ್ತದೆ. 4 ವಾರಗಳ ನಂತರ ಇದನ್ನು ಒಂದು ಪಾತ್ರೆಗೆ ಸೋಸಿಕೊಂಡು ಬಾಟಲಿಗೆ ತುಂಬಿಸಿಕೊಳ್ಳಿ. ಅಡುಗೆ ಮನೆ ಕಟ್ಟೆ, ಬಾತ್ ರೂಂ ತೊಳೆಯುವುದಕ್ಕೆ, ನೆಲ ಒರೆಸುವುದಕ್ಕೆ ಇದನ್ನು ಬಳಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...