alex Certify ಇಲ್ಲಿದೆ ರುಚಿಕರ ʼಅಕ್ಕಿ ಕಡುಬು’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರುಚಿಕರ ʼಅಕ್ಕಿ ಕಡುಬು’ ಮಾಡುವ ವಿಧಾನ

ಇಡ್ಲಿ, ದೋಸೆ ಸಾಮಾನ್ಯವಾಗಿ ಮನೆಯಲ್ಲಿ ಮಾಡುತ್ತಾ ಇರುತ್ತೇವೆ. ಒಮ್ಮೆ ಈ ಅಕ್ಕಿ ಕಡುಬನ್ನು ಮಾಡಿ ಸವಿಯಿರಿ. ಇದು ಉಡುಪಿ – ಮಂಗಳೂರು ಕಡೆ ಬೆಳಗ್ಗಿನ ತಿಂಡಿಗೆ ಮಾಡುತ್ತಾರೆ. ಕಡಿಮೆ ಸಾಮಾಗ್ರಿಯಲ್ಲಿ ಮಾಡಿಬಿಡಬಹುದು.

2 ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು 8 ಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಈ ಅಕ್ಕಿಯನ್ನು ಹಾಕಿ ಅದನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಈ ರುಬ್ಬಿಟ್ಟುಕೊಂಡ ಮಿಶ್ರಣ ಸೇರಿಸಿ. ಈ ಮಿಶ್ರಣ ತೆಳುವಾಗಿರಲಿ. ನಂತರ ಇದಕ್ಕೆ 1 ಕಪ್ ತೆಂಗಿನಕಾಯಿ ತುರಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಹದ ಉರಿಯಲ್ಲಿ ಚೆನ್ನಾಗಿ ಕೈಯಾಡಿಸುತ್ತಾ ಇರಿ. ಇದು ದಪ್ಪಗಾಗುತ್ತಾ ಬರುತ್ತದೆ. ಉಂಡೆ ಹದಕ್ಕೆ ಬರುವವರೆಗೆ ಈ ಮಿಶ್ರಣವನ್ನು ಕೈಯಾಡಿಸುತ್ತಾ ಇರಿ. ನಂತರ ಕೈಗೆ ಸ್ವಲ್ಪ ನೀರು ಸವರಿಕೊಂಡು ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿ ಇಟ್ಟು 8 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...