ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ…? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು ಹನಿಗಳನ್ನು ಮೂಗಿಗೆ ಹಾಕಿ. ಹತ್ತು ನಿಮಿಷದಲ್ಲಿ ರಿಲ್ಯಾಕ್ಸ್ ಅನುಭವಿಸುತ್ತೀರಿ.
ಇದನ್ನು ಮೂರರಿಂದ ನಾಲ್ಕು ತಿಂಗಳು ಪ್ರಯೋಗ ಮಾಡಿ ನೋಡಿದಾಗ ಮೆದುಳಿನ ಫಂಕ್ಷನ್ ಗಳು ಸ್ಟಿಮೂಲೇಟ್ ಆಗುತ್ತದೆ. ಅಂದರೆ ಆರೋಗ್ಯಕರವಾಗಿ ಮೆದುಳು ಕೆಲಸ ಮಾಡುತ್ತದೆ. ಖಿನ್ನತೆ ಮತ್ತು ಇನ್ನಿತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕ್ರಮೇಣವಾಗಿ ಕಡಿಮೆ ಆಗುತ್ತದೆ. ನಿದ್ರಾಹೀನತೆ ಸಮಸ್ಯೆ ಇರುವವರು ಈ ಕ್ರಮವನ್ನು ಅನುಸರಿಸಬಹುದು.
ಅಸ್ತಮಾ ರೋಗಿಗಳು ಅಥವಾ ಉಸಿರಾಟದ ತೊಂದರೆ ಇರುವವರು ಈ ರೀತಿ ಶುದ್ಧವಾಗಿರುವ ತುಪ್ಪದ ಒಂದೆರಡು ಹನಿಗಳನ್ನು ಮೂಗಿನಲ್ಲಿ ಹಾಕಿ ರಿಲ್ಯಾಕ್ಸ್ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಬೇಗ ಕಡಿಮೆ ಆಗುತ್ತವೆ. ಹಾಗೆ ಈ ಮೆಥಡ್ ಹೈ ರಿಲೇಟೆಡ್ ಪ್ರಾಬ್ಲಮ್ ಗಳಲ್ಲಿ ಸಹಾ ಉಪಯೋಗ ಆಗುತ್ತದೆ.