ಸುಲಭವಾಗಿ ಮಾಡಿ ಶೇಂಗಾ ಪಕೋಡ

ಸಂಜೆ ಟೀ ಸಮಯಕ್ಕೆ ಏನಾದರೂ ಸ್ಯ್ನಾಕ್ಸ್ ಇದ್ದರೆ ತಿನ್ನೋಣ ಅನಿಸುತ್ತೆ. ಸುಲಭವಾಗಿ ಜತೆಗೆ ರುಚಿಕರವಾದಂಥ ಶೇಂಗಾ ಪಕೋಡಾ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

2 ಕಪ್ – ಕಡಲೆಹಿಟ್ಟು, 1 ಕಪ್ – ಅಕ್ಕಿ ಹಿಟ್ಟು, 1 ಕಪ್ – ಶೇಂಗಾ ಬೀಜ, 1 ಟೀ ಸ್ಪೂನ್ – ಖಾರದಪುಡಿ, 2 ಟೀ ಸ್ಪೂನ್ -ಉಪ್ಪು, ಕರಿಬೇವು – 10 ಎಸಳು, ಎಣ್ಣೆ – ಕರಿಯಲು.

ಮಾಡುವ ವಿಧಾನ:

ಒಂದು ಬೌಲ್ ಗೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಶೇಂಗಾ ಬೀಜ, ಖಾರದ ಪುಡಿ, ಕರಿಬೇವು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ 1 ಟೇಬಲ್ ಸ್ಪೂನ್ ಬಿಸಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಒಂದು ಹಿಡಿ ನೀರನ್ನು ಈ ಹಿಟ್ಟಿನ ಮಿಶ್ರಣದ ಮೇಲೆ ಸಿಂಪಡಿಸಿ ಮುದ್ದೆ ರೀತಿ ಮಾಡಿಕೊಳ್ಳಿ. ನಂತರ ಈ ಹಿಟ್ಟಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಕೈಯಿಂದ ತೆಗೆದು ಕಾದ ಎಣ್ಣೆಯಲ್ಲಿ ಕರಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read