ಅಲೋವೆರಾದ ಪ್ರಯೋಜನಗಳ ಬಗ್ಗೆ ನೀವು ಇತರರು ಹೇಳಿರುವುದನ್ನು ಕೇಳಿರಬಹುದು. ಆದರೆ ಇದನ್ನು ಸೇವಿಸುವ ವಿಧಾನದ ಬಗ್ಗೆ ನಿಮಗೆ ಗೊತ್ತೇ…? ಅಲೋವೆರಾದಲ್ಲಿ ಮೂರು ಭಾಗಗಳಿವೆ. ಮೇಲ್ಭಾಗವನ್ನು ಅಲೋವೆರಾ ರಿಂಡ್ ಎನ್ನುತ್ತಾರೆ. ಮಧ್ಯಭಾಗವನ್ನು ಇನ್ನರ್ ಲೀಫ್ ಎಂದು ಕರೆಯುತ್ತಾರೆ. ಈ ಭಾಗದಿಂದ ಜೆಲ್ ತಯಾರಾಗುತ್ತದೆ. ಮೂರನೇ ಭಾಗವನ್ನು ಅಲೋವೆರಾ ಲ್ಯಾಟಿಕ್ಸ್ ಎನ್ನುತ್ತಾರೆ.
ಇದು ಅಲೋವೆರಾದ ಕೆಳಭಾಗದಲ್ಲಿರುವ ಅರಿಶಿನ ಬಣ್ಣದ ರಸ. ಇದನ್ನು ಎಲ್ಲೋಯಿಷ್ ಸ್ವೀಟ್ಸ್ ಎಂದು ಕರೆಯುತ್ತಾರೆ. ಈ ರಸವನ್ನು ಸೇವಿಸಬಾರದು. ಇದನ್ನು ಯಾವುದೇ ಕಾರಣಕ್ಕೂ ಚರ್ಮಕ್ಕೂ ಹಚ್ಚಬಾರದು. ಸೂಕ್ಷ್ಮ ಚರ್ಮದವರು ಕಡ್ಡಾಯವಾಗಿ ಇದರಿಂದ ದೂರವಿರಬೇಕು.
ಇಲ್ಲವಾದರೆ ಚರ್ಮ ತುರಿಕೆ ಮತ್ತು ಸ್ಕಿನ್ ಬ್ಲೀಚಿಂಗ್ ಮತ್ತು ಸ್ಕಿನ್ ಗೆ ರೆಡ್ ನೆಸ್ ಗೆ ಕಾರಣವಾಗಬಹುದು. ಚರ್ಮಕ್ಕೆ ಕಾಂತಿ ನೀಡುವ ಅಲೋವೆರಾ ಜ್ಯೂಸ್ ಅನ್ನು ಫ್ರೆಶ್ ಆಗಿ ತಯಾರಿಸಿ ಕುಡಿಯಬೇಕು. ಸಾಧ್ಯವಾದಷ್ಟು ಅಲೋವೆರಾವನ್ನು ಮನೆಯಲ್ಲೇ ಬೆಳೆಸಲು ಪ್ರಯತ್ನಿಸಿ.