ಬೇಕಾಗುವ ಪದಾರ್ಥಗಳು : ತೊಂಡೆಕಾಯಿ 1/4 ಕೆ ಜಿ, ಒಣ ಮೆಣಸಿನಕಾಯಿ 6-10, ಜೀರಿಗೆ – 1 ಚಮಚ, ಒಣ ಕೊಬ್ಬರಿ – 4 ಚಮಚ, ಹುಣಸೆಹಣ್ಣು – ಸ್ವಲ್ಪ, ಅರಿಶಿನ – ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಸಾಸಿವೆ – 1 ಚಮಚ, ಎಣ್ಣೆ – 3 ಚಮಚ, ಕರಿಬೇವು 10 ಎಲೆ, ಬೆಲ್ಲ – ಸ್ವಲ್ಪ.
ತಯಾರಿಸುವ ವಿಧಾನ : ಮೊದಲು ತೊಂಡೆಕಾಯಿಯನ್ನು ತೊಳೆದು ಉದ್ದುದ್ದಕ್ಕೆ ಕತ್ತರಿಸಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ತೊಂಡೆಕಾಯಿ, ಜೀರಿಗೆ, ಒಣಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಹುರಿದ ಸಾಮಗ್ರಿಗಳ ಜೊತೆ ಕೊಬ್ಬರಿ ತುರಿ, ಅರಿಶಿನ, ಉಪ್ಪು, ಹುಣಸೆಹಣ್ಣು, ಬೆಲ್ಲವನ್ನು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಮಧ್ಯದಲ್ಲಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.